ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಜಾಧವ್ ಗುಂಪುಗಾರಿಕೆ ಮತ್ತೇ ಮುಂದುವರಿದಿದೆ. ಫಿನಾಲೆ ಟಿಕೆಟ್ ಓಟದಲ್ಲಿ ಈ ಇಬ್ಬರು ಸೇರಿ ಧನರಾಜ್ ನನ್ನು ಹೊರಹಾಕುವ ಮೂಲಕ ಮತ್ತೊಮ್ಮೆ ಇದನ್ನು ಸಾಭೀತುಪಡಿಸಿದ್ದಾರೆ.
ಇಂದು ಬೆಳಗ್ಗೆ ಹೊರಬಂದಿರುವ ಫ್ರೋಮದಲ್ಲಿ ಫಿನಾಲೆ ಟಿಕೆಟ್ ಓಟದಲ್ಲಿ ಒಬ್ಬರನ್ನು ಹೊರಗಿಡುವಂತೆ ಸೂಚಸಿದ್ದಾರೆ. ಸಹಜವಾಗಿಯೇ ಮಂಜು ಮತ್ತು ಗೌತಮಿ ತಮ್ಮ ಗೆಳೆತನವನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಸದಾ ಟಾರ್ಗೆಟ್ ನಾಮಿನೇಷನ್ ಬಗ್ಗೆಯೇ ಮಾತನಾಡುವ ಈ ಇಬ್ಬರು ಧನರಾಜ್ ನನ್ನು ಕ್ಷÄಲಕ ಕಾರಣ ನೀಡಿ ಹೊರಗಟ್ಟಿದ್ದಾರೆ.
ಈ ಇಬ್ಬರು ಧನರಾಜ್ ಹೆಸರು ತೆಗೆದುಕೊಳ್ಳುತ್ತಿದ್ದಂತೆಯೇ ಇಡೀ ಮನೆಯ ಸದಸ್ಯರೆಲ್ಲ ಚಪ್ಪಾಳೆ ತಟ್ಟಿ ಗೇಲಿ ಮಾಡಿದ್ದಾರೆ. ಹರಕೆಯ ಕುರಿಯಂತೆ ಧನರಾಜ್ ನಿಂತಿದ್ದಾನೆ. ಆತನನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಛೇಡಿಸಿದ್ದಾರೆ. ರಜತ್ ಮತ್ತು ತ್ರಿವಿಕ್ರಮ್ ಧನರಾಜ್ ನನ್ನು ಹೊರಗಿಡಲು ಮಂಜು ಮತ್ತು ಗೌತಮಿ ನೀಡಿದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಜತ್ ಮಂಜು ಬಳಿಯೂ ಈ ಬಗ್ಗೆ ಮಾತನಾಡಿದ್ದೂ, ಗೌತಮಿಗಿಂತಲೂ ಧನರಾಜ್ ವೀಕ್ ಎಂದು ಹೇಗೆ ಹೇಳ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ, ನಿಮ್ಮಬ್ಬರ ಜಂಟಿ ಆಟಕ್ಕೆ ಆತನನ್ನು ಬಲಿ ಮಾಡಿದ್ರಿ ಎಂದು ಹೇಳಿದ್ದಾರೆ. ಇದರಿಂದ ಉಗ್ರಂ ಮಂಜು ಸಿಟ್ಟಾಗಿರುವುದು ಕಂಡುಬAದಿದೆ.
ಧನರಾಜ್ ಹಿಂದಿನ ಟಾಸ್ಕ್ ನಲ್ಲಿ ಗೆದ್ದು ಫಿನಾಲೆ ಟಿಕೆಟ್ ಓಟಕ್ಕೆ ಆಯ್ಕೆಯಾಗಿದ್ದರೂ ಸಹ ಟಾಸ್ಕ್ ನಲ್ಲಿ ನಡೆದ ವಾದದಲ್ಲಿ ಸೋತು ವಾಪಸ್ ಆಗಿದ್ದರು. ಇಂತಹ ತ್ಯಾಗದ ಮನಸ್ಥಿತಿ ಬಿಗ್ ಬಾಸ್ ಮನೆಗಲ್ಲ, ಇಷ್ಟೊಂದು ಅಸಹಾಯಕೆ ವ್ಯಕ್ತಪಡಿಸಿದರೆ ಗೆಲುವು ಕಷ್ಟ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಅಂತೆಯೇ ಧನರಾಜ್ ಹರಕೆಯ ಕುರಿಯಾಗಿದ್ದಾರೆ.