ಬೆಂಗಳೂರು: ಕಾಮಿಡಿ ನಟನಾಗಿ ಚಿತ್ರರಂಗಕ್ಕೆ ಬಂದರೂ ಅತ್ಯದ್ಭುತ ಪ್ರೇಮಕಾವ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಮಹೋನ್ನತ ದೃಶ್ಯಕಾವ್ಯ ಸಂಜು ಮತ್ತು ಗೀತಾ-2 ನಾಳೆ ತೆರೆಗೆ ಬರಲಿದೆ.
ಇತ್ತೀಚಿನ ವರ್ಷಗಳಲ್ಲಿ ಉತ್ಕಟ ಪ್ರೇಮಕ್ಕೆ ಸಂಬAಧಿಸಿದ ಚಲನಚಿತ್ರಗಳು ಬರುವುದೇ ಕಡಿಮೆ. ಕಳೆದ ಎರಡು ವರ್ಷಗಳಿಂದ ಸಿನಿಮಾದ ಮೇಲೆ ಕೆಲಸ ಮಾಡುತ್ತಿದ್ದ ಚಿತ್ರತಂಡ ಇದೀಗ ಸಂಜು ವೆಡ್ಸ್ ಗೀತಾ ಸಿನಿಮಾವನ್ನು ತೆರೆಗೆ ತಂದಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಹಿಟ್ ಆಗಿದ್ದು, ಸಿನಿಮಾ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೈನಾ, ಸಂಜು ಮತ್ತು ಗೀತಾ ಮೊದಲ ಸೀಕ್ವೆಲ್ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ನಾಗಶೇಖರ್ ಮತ್ತೊಂದು ಪ್ರೇಮಕಾವ್ಯಕಟ್ಟಿಕೊಟ್ಟಿದ್ದಾರೆ. ಶ್ರೀನಗರ ಕಿಟ್ಟಿ ನಾಯಕನಾಗಿದ್ದರೆ, ರಚಿತಾ ರಾಮ್ ನಾಯಕಿಯಾಗಿದ್ದಾರೆ. ತಾರಾಬಳಗದಲ್ಲಿ ದೊಡ್ಡ ದಂಡೇ ಇದ್ದು, ಛಲವಾದಿ ಪಿ.ಕುಮಾರ್ ನಿರ್ಮಾಣ ಮಾಡಿದ್ದಾರೆ.
ವಿ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ನಾಳೆಯಿಂದ ರಾಜ್ಯಾದ್ಯಂತ ತೆರೆಕಾಣಲಿರುವ ಸಿನಿಮಾ ಬೇರೆಯದ್ದೇ ಸಿನಿಮಾಗಳ ಗುಂಗಿನಲ್ಲಿರುವ ಕನ್ನಡ ಪ್ರೇಕ್ಷಕರಿಗೆ ಒಂದು ಹೊಸ ಪ್ರೇಮ ಕಾವ್ಯವಾಗಿ ಮನಗೆಲ್ಲಲಿದೆ ಎಂಬುದು ಸಿನಿಮಾ ತಂಡದ ಅಭಿಪ್ರಾಯ.