ಕೆ.ಆರ್.ಪೇಟೆ: ಮಗುವಿನ ಜತೆಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಅನೈತಿಕ ಸಂಬAಧದ ವಿಚಾರ ಕಾರಣ ಎನ್ನಲಾಗಿದೆ. ಪತ್ನಿಯ ಅನೈತಿಕ ಸಂಬAಧದ ಬಗ್ಗೆ ಜಗಳವಾಡಿದ್ದ ಪತಿ, ಹೊಲಕ್ಕೆ ತೆರಳಿದ್ದ ವೇಳೆ ಪತ್ನಿ ತನ್ನ ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ನೇಣಿಗೆ ಶರಣಾದ ಶಿಲ್ಪಾ ಎಂಬ ಗೃಹಿಣಿ ತನ್ನಿಬ್ಬರು ಮಕ್ಕಳನ್ನು ಕೂಡ ಹಗ್ಗಕ್ಕೆ ನೇತು ಹಾಕಿದ್ದರು. ಅದರಲ್ಲಿ ಒಂದು ಮಗು ಶಿಲ್ಪಾ ಜತೆಗೆ ಪ್ರಾಣಬಿಟ್ಟಿದ್ದು, ಮತ್ತೊಂದು ಮಗು ಅದೃಷ್ಟವಶಾತ್ ಹಗ್ಗದಿಂದ ನುಣುಚಿಕೊಂಡು ಕೆಳಗೆ ಬಿದ್ದು ಬಚಾವಾಗಿದೆ.
ಮಗು ಅಳುವ ಸದ್ದು ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ ಘಟನೆ ಬಯಲಿಗೆ ಬಂದಿದೆ. ಈ ಹಿಂದೆ ಶಿಲ್ಪಾಳ ಅನೈತಿಕ ಸಂಬAಧದ ಹಿನ್ನೆಲೆಯಲ್ಲಿ ಸಂಬAಧಿಕರು ಮತ್ತು ಗ್ರಾಮಸ್ಥರು ಪಂಚಾಯಿತಿ ನಡೆಸಿದ್ದರು ಎನ್ನಲಾಗಿದ್ದು, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.