ಉಪಯುಕ್ತ ಸುದ್ದಿ

ಬುದ್ಧ ಚಾರಿಟೇಬಲ್ ಟ್ರಸ್ಟ್ ನಿಂದ ಅದ್ದೂರಿ ಅಂಬೇಡ್ಕರ್ ಜಯಂತಿ ಆಚರಣೆ

Share It

ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ರಾಜಗೋಪಾಲ್ ನಗರ ಬಡವರ ಬಂಧು ದಿವಂಗತ ಬಿ ನಟ ರಾಜಕುಮಾರ್ ರಸ್ತೆಯ ವಿಶ್ವಮಾನವ ಅಂಬೇಡ್ಕರ್ ಪುತ್ತಳಿ ಹತ್ತಿರ ವಿಶ್ವಮಾನವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 133 ನೇ ಅದ್ದೂರಿ ಜಯಂತಿ ಆಚರಿಸಲಾಯಿತು.

ವಿಶ್ವಚೇತನ ಬುದ್ಧ ಚಾರಿಟೇಬಲ್ ಟ್ರಸ್ಟ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ, ಅಹಿಂದ ಹಕ್ಕುಗಳ ಹೋರಾಟ ವೇದಿಕೆ ರಾಜ್ಯಾಧ್ಯಕ್ಷ ಜಿ ಅಂಜನಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಸಮಾಜ ಸೇವಕ ಬಿಜೆಪಿ ಮುಖಂಡ ತಿಮ್ಮರಾಜ್ ಗೌಡರು ಹಾಗೂ ಕಾಂಗ್ರೆಸ್ ಮುಖಂಡ ರುದ್ರಗೌಡರು ಅಂಬೇಡ್ಕರ್ ಭಾವಚಿತ್ರ ಬೆಳ್ಳಿರಥದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ಹೆಗ್ಗೇನಹಳ್ಳಿ ಮುಖ್ಯ ರಸ್ತೆ ಮಾರುತಿ ನಗರ ಅಂದ್ರಳ್ಳಿ ಮುಖ್ಯ ರಸ್ತೆ ಎರಡನೇ ಹಂತದ ಮುಖಾಂತರ ರಾಜಗೋಪಾಲ್ ನಗರ ರಸ್ತೆ ಬಸಪ್ಪನ ಕಟ್ಟೆ. ಅಂಬಿ ಸರ್ಕಲ್ ಇನ್ನಿತರ ಭಾಗದಲ್ಲಿ ಮತ್ತು ಹಲವು ಜಾನಪದ ಕಲತಂಡುಗಳು ತಮಟೆ ವಾಲಗಗಳೊಂದಿಗೆ ಅದ್ದೂರಿ ಮೆರವಣಿಗೆ ಏರ್ಪಡಿಸಲಾಗಿತ್ತು.

ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ವಿಷ್ಣುಪ್ರಿಯ ಕಲಾತಂಡದಿಂದ ನೃತ್ಯ, ಜೋಗಿಲ ಸಿದ್ದರಾಜ್ ತಂಡದಿಂದ ಜಾನಪದ ಹಾಡುಗಳು, ಮರಿದೇವರ ತಂಡದಿಂದ ಅಂಬೇಡ್ಕರ್ ರ ಬಗ್ಗೆ ಜಾನಪದ ಶೈಲಿಯ ಹಾಡುಗಳು ಸಾವಿರಾರು ಅಂಬೇಡ್ಕರ ಅನುಯಾಯಿಗಳು ಹಾಗೂ ಅಭಿಮಾನಿಗಳ ಮನರಂಜಿಸಿದರು.

ಇದೆ ವೇಳೆ ವಕೀಲ ಲಿಂಗರಾಜು ಅಂಬೇಡ್ಕರವರು ಕಷ್ಟ ಸುಖಗಳ ನಡೆದು ಬಂದ ದಾರಿ ಹತ್ತು ಹಲವು ಅವರ ವಿಚಾರಗಳನ್ನು ಕುರಿತು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಸೇನೆಯ ಪಿ ಮೂರ್ತಿ, ಡಿಎಸ್ಎಸ್ ಮೂರ್ತಿ, ಕರ್ನಾಟಕ ಭಹುಜನ ಚಳುವಳಿ ರಾಜ್ಯಾಧ್ಯಕ್ಷ ಕನಕೆನಹಳ್ಳಿ ಕೃಷ್ಣಪ್ಪ,, ಅಕ್ರಮ್ ಬಾಷಾ, ಸೈಯದ್ ಮೌಲಾ, ಮಾಳಗಾಳ ಪ್ರದೀಪ್, ಕೆಂಪರಾಜು, ವಿಜಯ್ ಕುಮಾರ್, ಏಳುಮಲೆ, ರಾಜಣ್ಣ, ನೀಲರಾಜ್, ಸುರೇಶ್ ಬಾಬು, ರಮೇಶ್ ಬಾಬು, ಆಟೋ ರಾಮು, ಆಟೋ ಸೂರಿ, ಉಮೇಶ್ ಸಂಘದ ಮಹಿಳಾ ಮುಖಂಡರಾದ ಚಂದ್ರಮ್ಮ, ರೇಣುಕಾ, ಮಧು, ಸೌಭಾಗ್ಯಮ್ಮ, ರತ್ನಮ್ಮ ಉಪಸ್ಥಿತರಿದ್ದರು.


Share It

You cannot copy content of this page