ಬೆಂಗಳೂರು: ಬಿಗ್ ಬಾಸ್ ವಿನ್ನರ್ ಆಗಿ ಹಳ್ಳಿಹೈದ ಹನುಮಂತು ಆಯ್ಕೆಯಾಗಿದ್ದಾರೆ. ರನ್ನರ್ ತ್ರಿವಿಕ್ರಮ್ ಪಡೆದ ವೋಟ್‌ಗಿಂತ ಮೂರು ಕೋಟಿಗೂ ಹೆಚ್ಚು ವೋಟ್ ಹನುಮಂತುಗೆ ಬಿದ್ದಿದೆ ಎಂಬುದು ಅಂಕಿ-ಅAಶ ಹೇಳುತ್ತದೆ.
ಆದರೆ, ಇಷ್ಟೊಂದು ದೊಡ್ಡ ವೋಟ್‌ಗಳ ಅಂತರದಲ್ಲಿ ಹನುಮಂತು ಗೆದ್ದಿದ್ದರ ಹಿಂದೆ ಬಿಗ್ ಬಾಸ್‌ನಿಂದ ಎರಡನೇ ವಾರವೇ ಎಲಿಮಿನೇಟ್ ಆದ ಹಂಸಾ ನೀಡಿದ ಹೇಳಿಕೆ ಎಂಬ ಮಾತುಗಳು ಕೇಳಿಬಂದಿದೆ.
ಹಂಸ ಹನುಮಂತು ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವ ವೇಳೆ, ಹನುಮಂತ ಏನೂ ಮಾಡದೆ ಫೈನಲ್ ತಲುಪಿದ್ದಾನೆ. ಆತನಿಗೆ ಬಡವ, ಹಳ್ಳಿಯವನು ಎಂಬ ಸಿಂಪಥಿ ವರ್ಕ್ ಆಗಿದೆ. ಇದೊಂದು ರೀತಿ ಮೀಸಲಾತಿಯ ಎಫೆಕ್ಟ್ ಎಂದು ಹೇಳಿಕೆ ನೀಡಿದ್ದರು.
ಹನುಮಂತೂ ಏನೂ ಮಾಡದೆ, ಜನರ ಸಿಂಪಥಿ ಮತ್ತು ಮೀಸಲಾತಿಯ ಆಧಾರದಲ್ಲಿ ಫೈನಲ್ ತಲುಪಿದ್ದಾರೆ ಎಂಬರ್ಥದಲ್ಲಿ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ಫೈನಲ್‌ಗೆ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು.
ಮೀಸಲಾತಿ ಬಗ್ಗೆ ಹಂಸಾ ಮಾತನ್ನಾಡುತ್ತಿದ್ದಂತೆ ನೆಟ್ಟಿಗರು ಹಂಸಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಯಾವುದೇ ಜಾತಿ, ಧರ್ಮದ ಪ್ರಜ್ಞೆಯೂ ಇಲ್ಲದೆ ಸರಳತೆಯಿಂದಲೇ ಜನರಿಗೆ ಇಷ್ಟವಾದ ಹನುಮಂತುಗೆ ಸಿಕ್ಕಾಪಟ್ಟೆ ವೋಟ್ ಮಾಡಿದ್ದಾರೆ ಎನ್ನಲಾಗಿದೆ.
ಹಂಸಾ ಅವರ ಹೇಳಿಕೆ ಮತ್ತು ಜಾತಿಗ್ರಸ್ತ ಮನಸ್ಥಿತಿಯನ್ನು ವಿರೋಧಿಸುವ ಎಷ್ಟೋ ತಟಸ್ಥ ವೀಕ್ಷಕರು ಹನುಮಂತುವಿಗೆ ವೋಟ್ ಮಾಡಿದ್ದಾರೆ. ಇದರ ಪರಿಣಾಮವಾಗಿಯೇ ರನ್ನರ್ ಆಫ್ ಪ್ರಶಸ್ತಿ ಪಡೆದ ತ್ರಿವಿಕ್ರಮ್ ಅವರಿಗಿಂತ ಮೂರು ಕೋಟಿ ವೋಟ್ ಜಾಸ್ತಿ ಬಿದ್ದಿದೆ.
ಹನುಮಂತು ೫.೨೫ ಕೋಟಿ ಮತಗಳನ್ನು ಪಡೆದಿದ್ದರೆ, ರನ್ನರ್ ತ್ರಿವಿಕ್ರಮ್ ೨ ಕೋಟಿ ವೋಟ್‌ಗಳನ್ನಷ್ಟೇ ಪಡೆದಿದ್ದಾರೆ. ಇದಕ್ಕೆ ಹಂಸಾ ಅವರ ಮೀಸಲಾತಿ ಹೇಳಿಕೆಯೂ ಕಾರಣವಾಯ್ತು ಎಂಬುದು ನೆಟ್ಟಿಗರ ವರಸೆ.

