ರಾಜಕೀಯ ಸುದ್ದಿ

ಶೆಟ್ಟಿಹಳ್ಳಿ ಶ್ರೀ ಆಂಜನೇಯ ದೇವಸ್ಥಾನದ ಸಂಕಲ್ಪ ಪೂಜೆಯಲ್ಲಿ ಶಾಸಕ ಎಸ್. ಮುನಿರಾಜು ಭಾಗಿ

Share It

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಸಂಕಲ್ಪ ಪೂಜೆಯಲ್ಲಿ ಶಾಸಕ ಎಸ್. ಮುನಿರಾಜು ಭಾಗವಹಿಸಿದ್ದರು.

ಗ್ರಾಮದ ಕಂಬದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಲುವಾಗಿ ಗ್ರಾಮಸ್ಥರೆಲ್ಲ ಸೇರಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ನೆರವೇರಿಸಿದರು. ಅದೇ ದೇವಸ್ಥಾನದಲ್ಲಿರುವ ಶ್ರೀ ರಾಮನಿಗೆ ಪರ್ಯಾಯ ದೇವಸ್ಥಾನ ನಿರ್ಮಿಸಲು ನಿಧಿ ಸಂಗ್ರಹ ಮಾಡಲಾಯಿತು.

ಈ ವೇಳೆ ಮುನಿರಾಜು ಅವರು, ಕಂಬದ ನರಸಿಂಹ ಸ್ವಾಮಿ ದೇವಾಲಯ ಪುನರ್ನಿರ್ಮಾಣ ಯಾವುದೇ ಅಡೆತಡೆ ಇಲ್ಲದೆ ಆಗುವಂತೆ ಬೇಡಿಕೊಂಡರು. ಶ್ರೀರಾಮನಿಗೆ ಪ್ರತ್ಯೇಕ ರಾಮನ ದೇವಸ್ಥಾನ ಕಟ್ಟುವ ಹರಕೆ ಕಟ್ಟುತ್ತೇವೆ. ಗ್ರಾಮಸ್ಥರೆಲ್ಲ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಂಕಲ್ಪದ ವೇಳೆ ಶೆಟ್ಟಿಹಳ್ಳಿ ಗ್ರಾಮದ ಹಿರಿಯರು, ಮುಖಂಡರು ಭಾಗವಹಿಸಿದ್ದರು. ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಮುಖಂಡ ಬಿ.ಸುರೇಶ್, ಮಂಜುನಾಥ್, ಕೃಷ್ಣ ಮೊದಲಾದವರು ಭಾಗವಹಿಸಿದ್ದರು.


Share It

You cannot copy content of this page