ಬೆಂಗಳೂರು: ಸದಾ ಲೈಂಗಿಕ ಹಪಹಪಿಗೆ ಒಳಗಾಗಿದ್ದ ಗಂಡನೊಬ್ಬ ತನ್ನ ಮಡದಿಯನ್ನು ಮಗನ ಎದುರಿಗೆ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿಕಾ ನಗರದ ನಿವಾಸಿಗಳಾಗಿದ್ದ ಮಮತಾ(33) ಮತ್ತು ಸುರೇಶ್ ಮೃತರು. ಪತಿ ಸುರೇಶ್ ತನ್ನ ಪತ್ನಿ ಮಮತಾ ಗಳನ್ನು ಆರು ವರ್ಷದ ಮಗನ ಮುಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುರೇಶ್ ತನ್ನ ಪತ್ನಿಗೆ ವಿಪರೀತ ಲೈಂಗಿಕ ಕಿರುಕುಳ ನೀಡುತ್ತಿದ್ದ, ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಂತೆ ತಡೆದುಕೊಳ್ಳಲು ಹೇಳುತ್ತಿದ್ದ. ಆಕೆ ವಿರೋಧಿಸಿದ ಕಾರಣಕ್ಕೆ ಆಗಾಗ ಜಗಳವಾಗುತ್ತಿತ್ತು. ಇಂದು ಜಗಳ ವಿಕೋಪಕ್ಕೆ ತಿರುಗಿ ಕೊಲೆ ಮಾಡಿದ್ದಾನೆ ಎಂದು ಮಮತಾ ಸಂಬಂಧಿಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಮನೆಯ ಬಳಿ ಸಂಬಂಧಿಕರ ಆಕ್ರಂಧನ ಮುಗಿಲುಮುಟ್ಟಿದೆ.