ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೇ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಹಬ್ಬ ಶುರುವಾಗುತ್ತಿದೆ. ಐಪಿಎಲ್ ನ 18 ಆವೃತಿಯು ಇದೆ ಮಾರ್ಚ್ 22 ರಿಂದ ಆರಂಭವಾಗಲಿದ್ದು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಳೆಯಿಂದ ತನ್ನ ಅಭ್ಯಾಸವನ್ನು ಮಾಡಲಿದೆ ಎಂದು ವರದಿಯಾಗಿವೆ. ಈಗಾಗಲೇ ಕೋಚ್ ಹಾಗೂ ಇತರರು ಭಾಗಿಯಾಗಿದ್ದಾರೆ.
ಈ ಭಾರಿಯ ಆವೃತಿಗೂ ಹಾಗೂ ವಿರಾಟ್ ಕೊಹ್ಲಿ ಗೂ ಅವಿನಾಭಾವ ಸಂಬಂಧವಿದೆ . ಕೊಹ್ಲಿಯವರ ಜೆರ್ಸಿ ನಂಬರ್ ಕೂಡ 18 ಆವೃತಿ ಕೂಡ 18 ಈ ಭಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಗೆಲ್ಲುತ್ತದೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ಅದೇನೇ ಆಗಲಿ ಈ ಬಾರಿ ಹೊಸ ನಾಯಕ ರಜತ್ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲವೂ ಇದರ ನಡುವೆ ಇದ್ದೆ ಇದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ತಂಡಗಳು ಎದುರಾಗಲಿವೆ.