ರಾಜಕೀಯ ಸುದ್ದಿ

ಕೆಎಸ್ ಆರ್ ಟಿಸಿ ಮುಷ್ಕರದ ಹಿನ್ನೆಲೆ: ಸರ್ಕಾರದ ‘ಸಾಧನಾ ಸಮಾವೇಶ’ದ ದಿನಾಂಕ ಬದಲಾವಣೆ

Share It

ಕೆಎಸ್ ಆರ್ ಟಿಸಿ ಮುಷ್ಕರದ ಹಿನ್ನೆಲೆ: ಸರ್ಕಾರದ ‘ಸಾಧನಾ ಸಮಾವೇಶ’ ಕಾರ್ಯಕ್ರಮವನ್ನು ಮೇ 19ಕ್ಕೆ ಸ್ಥಳಾಂತರ

ತುಮಕೂರು– ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶವು ಈಗ ಮೇ 20ರ ಬದಲಿಗೆ ಮೇ 19 ರಂದು ನಡೆಯಲಿದೆ. ಈ ಬದಲಾವಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ನೌಕರರು ಮೇ 29 ರಂದು ಮುಷ್ಕರಕ್ಕೆ ಕರೆ ನೀಡಿರುವುದೇ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ಮೂಲತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಮೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ಮೇ ೨೦ ರಂದು ತುಮಕೂರಿನಲ್ಲಿ ‘ಸಾರ್ಥಕ ಸೇವೆಗಳ ಸಮರ್ಪಣೆ’ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆ ದಿನದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವ ಸಾಧ್ಯತೆ ಇರುವುದರಿಂದ, ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಮುನ್ನಾ ದಿನವೇ ಸಮಾವೇಶವನ್ನು ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಡಾ. ಪರಮೇಶ್ವರ್ ಅವರು, ಹಲವು ವರ್ಷಗಳಿಂದ ಕೈಗೆತ್ತಿಕೊಳ್ಳದೆ ಇದ್ದ ಯೋಜನೆಗಳನ್ನು ಸರ್ಕಾರ ಪ್ರಶಸ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದೆ. ಈ ಸಾಧನೆಗಳನ್ನು ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶ ಕಾರ್ಯಕ್ರಮದ್ದಾಗಿದೆ. ದಿನಾಂಕ ಬದಲಾದರೂ, ಉಳಿದ ಎಲ್ಲಾ ಕಾರ್ಯಕ್ರಮಗಳು ಪೂರ್ವಯೋಜಿತ ರೀತಿಯಲ್ಲೇ ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದರು.


Share It

You cannot copy content of this page