ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ತನ್ನ ಅಕ್ಕನ ಮಗ ನಿಗೆ ಚಿತ್ರದಿಂದ ಗೇಟ್ ಪಾಸ್ ನೀಡಿರುವ ದಚ್ಚು ಈಗ ತನ್ನ ಆಪ್ತರ ವಿಚಾರದಲ್ಲಿಯೂ ಈ ನಿಲುವನ್ನು ತಾಳುತ್ತಿರುವುದು ಆಚರಿಯನ್ನು ಮೂಡಿಸಿದೆ.
ಸದ್ಯ ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್ ಶುರುವಾಗುವ ಮುನ್ನವೇ ತನ್ನ ಇನ್ಸ್ಟ ಖಾತೆಯಲ್ಲಿ ಫಲೋ ಮಾಡುತ್ತಿದ್ದವರನ್ನು ಆನ್ ಫಲೋ ಮಾಡಿದ್ದಾರೆ. ಅವರಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಷ್, ಅವಿವಾ ಅಭಿಷೇಕ್, ಡಿ ಕಂಪನಿ ಹಾಗೂ ದಿನಕರ್ ತೂಗುದೀಪ್, ವಿನೇಶ್ ಇಷ್ಟು ಜನರನ್ನು ಅನ್ ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ದರ್ಶನ್ ಸುಮಲತಾ ಅಂಬರೀಶ್ ಅವರನ್ನು ಆನ್ ಫಾಲೋ ಮಾಡುತ್ತಿದ್ದಂತೆ ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಸತ್ಯವನ್ನು ತಿರುಚುವ, ಪಚ್ಚಾತಾಪವಿಲ್ಲದೆ ಜನರನ್ನು ನೋಹಿಸುವ ಹಾಗೂ ಆರೋಪ ಮಾಡುವ ತಮ್ಮನ್ನು ತಾವು ನಾಯಕನೆಂದು ಪರಿಗಣಿಸಿಕೊಳ್ಳುವವರಿಗೆ ಆಸ್ಕರ ಪ್ರಶಸ್ತಿ ನೀಡಬೇಕೆಂದು ಪೋಸ್ಟ್ ಹಾಕಿದ್ದಾರೆ.
ನನ್ನ ಮಗ ಅಥವಾ ಚಂದು ವಿನ ಮೂಲಕ ನನಗೆ ಹತ್ತಿರವಾಗಲು ಹಲವು ಪ್ರಯತ್ನ ಪಡುತ್ತಾರೆ. ನನಗೆ ಇದು ಇಷ್ಟವಾಗುವುದಿಲ್ಲ ಎಂದು ಪೋಸ್ಟ್ ಹಾಕುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.