ಲೇಖನಿ ಮೌನವಾಗಿದೆ
ಕೋಮುವಾದದ ಬಂದೂಕಿನ ಗುಂಡು
ಕಾವ್ಯದೆದೆಯ ಗುಂಡಿಗೆಯ ಛೇದಿಸಿ!
ಚಿಲ್ಲನೆ ಚಿಮ್ಮಿದ ಕಾವ್ಯದ ನೆತ್ತರು
ತಣ್ಣನೆ ಇಳೆಗೆ ಜಾರಿ ಮಣ್ಣ ಸೇರಿದೆ!!
ಮಣ್ಣಲ್ಲ ನೆಂದು ಹೆಪ್ಪುಗಟ್ಟಿ
ಜಿಡ್ಡು ಹಿಡಿದಿದೆ ಕಾವ್ಯದ ನೆತ್ತರು!
ಸಾಮರಸ್ಯದ ಮಳೆಗೆ ಹರಿದು
ಹೊಳೆಯು ಸೇರಿದೆ ಕಾವ್ಯದ ನೆತ್ತರು!!
ಭ್ರಷ್ಟಾಚಾರದ ಬೇರು ಕತ್ತರಿಸುವ
ಖಡ್ಗವಾಗಬೇಕಾದ ಲೇಖನಿ!
ಭ್ರಷ್ಟಾಚಾರದ ಬೆದರಿಕೆಗೆದರಿ
ಭ್ರಷ್ಟ ರಾಕ್ಷಸರ ಉರಗೊಲಾಗಿದೆ!!
ರೈತರ ಬೆನ್ನಿಗೆ ಬೆನ್ನುಲುಬಾಗಿ
ನಿಲ್ಲಬೇಕಾದ ಲೇಖನಿಯು!
ರೈತರ ಬೆನ್ನ ಮೂಳೆ ಮುರಿದು
ಕತ್ತು ಕೊಯ್ಯುವ ಬೆತ್ತವಾಗಿದೆ!!
ನೋವಲ್ಲಿ ನಲುಗಿದವರ ಬಾಳಿಗೆ
ನಲಿವಾಗಬೇಕಾದ ಲೇಖನಿ!
ಬೆಂಕಿ ಕೊಳ್ಳಿಯಾಗಿ ನೊಂದವರ
ಬದುಕು ಸುಟ್ಟು ಬೂದಿಯಾಗಿದೆ!!
ರಚನೆ: ಶ್ರೀಶೈಲ ಬಿರಾದರ ನಾಗನಟಗಿ