ಅಪರಾಧ ಸುದ್ದಿ

ಮಹಜರು ವೇಳೆ ಕೊಲೆ ಆರೋಪಿಗಳ ಕಿರಿಕ್: ಗುಂಡೇಟು ಕೊಟ್ಟ ಪೊಲೀಸರು

Share It

ಗದಗ: ನಗರದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆ ತಂದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಖಾಕಿ ಪಡೆ ಗುಂಡೇಟು ನೀಡಿ ಬಂಧಿಸಿದೆ.

ಗದಗ ಜಿಲ್ಲೆಯ ನರಗುಂದದ ಕುರ್ಲಗೇರಿ ಬಳಿ ಸೋಮವಾರ ನಡೆದ ಘಟನೆಯಲ್ಲಿ ಆರೋಪಿ ಫಿರೋಜ್ ಕಾಳಿಗೆ ಗುಂಡೇಟು ಹೊಡೆದಿರುವ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆತನ ಆಕ್ರಮಣದಿಂದ ಗಾಯಗೊಂಡಿರುವ ಪಿಎಸ್‌ಐ ಶಿವಾನಂದ ಪಾಟೀಲ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗದಗ ನಗರದ ದಾಸರ ಗಲ್ಲಿಯಲ್ಲಿ ಇತ್ತೀಚೆಗೆ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬAಧ ೮ ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬAಧ ಪ್ರಕರಣದ ಎ-೨ ಆರೋಪಿ ಫಿರೋಜ್ ಹಾಗೂ ಇತರ ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆತಂದಿದ್ದರು. ಆಗ ಫಿರೋಜ್ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.

ಮಹಜರು ವೇಳೆ ಗದಗ ಗ್ರಾಮಾಂತರ ಪಿಎಸ್‌ಐ ಶಿವಾನಂದ ಪಾಟೀಲ ಮೇಲೆ ಆರೋಪಿಯು ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ. ಆಗ ಪೊಲೀಸರು ಫಿರೋಜ್ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ಪಾಟೀಲ ಅವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡೇಟಿನಿAದ ಗಾಯಗೊಂಡ ಫಿರೋಜ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ ೧೯ ರಂದು ಬೆಳಗಿನ ಜಾವ ಗದಗ ನಗರದ ದಾಸರ ಗಲ್ಲಿಯಲ್ಲಿ ನಡೆದಿದ್ದ ಈ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು. ಆಸ್ತಿ ಮಾರಾಟ ವಿಚಾರವಾಗಿ ಕಲಹ ಉಂಟಾಗಿ ಮನೆಯ ಮಗನೇ ತನ್ನ ತಂದೆ ಹಾಗೂ ಮಲತಾಯಿ ಕೊಲೆಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಬಯಲಾಗಿತ್ತು. ಹಂತಕರು ತಪ್ಪಾಗಿ ಭಾವಿಸಿ, ಮನೆಗೆ ಬಂದಿದ್ದ ಸಂಬAಧಿಗಳು ಮತ್ತು ಕಿರಿಯ ಸಹೋದರನನ್ನು ಕೊಲೆ ಮಾಡಿದ್ದರು.


Share It

You cannot copy content of this page