ರಾಮನಗರ: ಗೆಳೆಯೊಬ್ಬನನ್ನು ನೀರಿನಿಂದ ಪಾರು ಮಾಡಲು ಹೋದ ಐವರು ಸ್ನೇಹಿತರು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯ ಕಾವೇರಿ ನದಿಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿ ಬಳಗದಲ್ಲಿ ಐವರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಯೊಬ್ಬ ಈಜಲು ನದಿಗೆ ಇಳಿದಿದ್ದಾನೆ. ಈ ವೇಳೆ ಆತ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಸಹಪಾಠಿಗಳು ರಕ್ಷಣೆಗೆ ತೆರಳಿದ್ದಾಗ ಒಬ್ಬರ ಹಿಂದೆ ಒಬ್ಬರು ನೀರಿಗೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಾಜಿನಗರದ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿನಿ 20 ವರ್ಷ ವಯಸ್ಸಿನ ವರ್ಷಾ, ಮಲ್ಲೇಶ್ವರ ಸರಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ 20 ವರ್ಷದ ಅಭಿಷೇಕ್, ಈ ಇಬ್ಬರು ಬಿಹಾರ ಮೂಲದವರಾಗಿದ್ದು, ಚಿಕ್ಕಬಾಣಾವರದ ಆರ್.ಆರ್. ಕಾಲೇಜಿನ ಎಂಜಿನಿಯರಿAಗ್ ಓದುತ್ತಿದ್ದ ಮಂಡ್ಯ ಮೂಲದ ವಿದ್ಯಾರ್ಥಿನಿ ಹರ್ಪಿತಾ ಎನ್.ಎಲ್, ವಿಜಯನಗರ ಸರ್ಕಾರಿ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ ಚಿತ್ರದುರ್ಗ ಮೂಲದ 21 ವರ್ಷದ ತೇಜಸ್, ಆರ್.ಆರ್. ನಗರದ ಕೆಎಲ್‌ಇ ಕಾಲೇಜಿನಲ್ಲಿ ಕೆಮಿಸ್ಟಿç ಓದುತ್ತಿದ್ದ ಚಿತ್ರದುರ್ಗ ಮೂಲದ 19 ವರ್ಷದ ನೇಹಾ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೇಕೆದಾಟು ವೀಕ್ಷಣೆಗೆ ಬೆಂಗಳೂರಿನಿAದ 12 ಕಾಲೇಜು ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ಕಾಲೇಜು ವಿದ್ಯಾರ್ಥಿಯೊಬ್ಬ ಈಜಾಡಲು ನದಿಗಿಳಿದಿದ್ದಾನೆ. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಸಹಪಾಠಿಗಳು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಒಬ್ಬರಂತೆ ಒಬ್ಬರು ಕಾಪಾಡಲು ತೆರಳಿ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.