ಚಾಮರಾಜ ನಗರ : ಚಾಮರಾಜ ನಗರದಲ್ಲಿ ನಡೆದಿರುವ ಅರಣ್ಯ ಇಲಾಖೆಯ ಎನ್ಕೌಂಟರ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಪ್ರತಿಭಟನೆ ಹಿಪಂಡೆಯಲು ಗ್ರಾಮಸ್ಥರು ಒಪ್ಪಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಕಾಡಿಗೆ ತೆರಳಿದ್ದವರ ಮೇಲೆ ಗುಂಡು ಹಾರಿಸಿದ್ದರು. ಇದ್ರಿಂದ ಮೂವರು ಮೃತಪಟ್ಟು, ಅವರ ಕುಟುಂಬಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮೂರು ದಿನಗಳಿಂದ ಪ್ರತಿಭಟನೆ ನಡೆಯುತಿತ್ತು.
ಹನೂರು ಶಾಸಕ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಸರಕಾರದಿಂದ ತಲಾ 5 ಲಕ್ಷ ಹಾಗೂ ಸ್ವತ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದರು. ಘಟನೆಯ ಸಂಬಂಧ ಸೂಕ್ತ ತನಿಖರ್ ನಡೆಸುವ ಹಾಗೂ ಕುಟುಂಬಸ್ಥರಿಗೆ ಉದ್ಯೋಗದ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲು ಕುಟುಂಬಸ್ಥರು ಒಪ್ಪಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ವಿಪಕ್ಷಗಳು ಭಾರೀ ಟೀಕೆ ವ್ಯಕ್ತಪಡಿಸಿದ್ದು, ಘಟನೆಯ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳ ಉಧಾಫೆಯ ನಡೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ, ಸೂಕ್ತ ಪರಿಹಾರ ಒದಗಿಸುವಂತೆಯೂ ಒತ್ತಾಯಿಸಿದ್ದರು. ಒತ್ತಡಕ್ಕೆ ಮಣಿದ ಸರಕಾರ ತನಿಖೆಗೆ ತೀರ್ಮಾನಿಸಿದ್ದು, ಪರಿಹಾರವನ್ನು ನೀಡಲು ಒಪ್ಪಿದೆ

