ಉತ್ತರ ಕನ್ನಡ:ಮುಂಡಗೋಡ ತಾಲೂಕಿನ ಪ್ರಸಕ್ತ ಸಾಲಿನ S.S.L.C ಪರೀಕ್ಷೆಗೆ ಗಂಡು ಮಕ್ಕಳು 554 ಮತ್ತು ಹೆಣ್ಣು ಮಕ್ಕಳು 697 ವಿದ್ಯಾರ್ಥಿಗಳು ಹಾಜರಾಗಿದ್ದು ಒಟ್ಟು 1251 ಜನ ಮಕ್ಕಳು ಪರೀಕ್ಷೆ ಬರೆದಿದ್ದರು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗಂಡು ಮಕ್ಕಳು 292 ಜನ ಮತ್ತು ಹೆಣ್ಣು ಮಕ್ಕಳು 525 ಒಟ್ಟು 817 ವಿದ್ಯಾರ್ಥಿಗಳು.
ಶೇಕಡವಾರು ಫಲಿತಾಂಶ 65.3% ಕಂಡುಬಂದಿದೆ.ಕಳೆದ ವರ್ಷಕ್ಕೆ ಹೋಲಿಸಿದ್ದರೆ ಶೇ 16ರಷ್ಟುಕಡಿಮೆ ಫಲಿತಾಂಶ ಕಂಡು ಬಂದಿದ್ದು ಮತ್ತು ಕಳೆದ ಸಾಲಿನಲ್ಲಿ 3 ಶಾಲೆಗಳು ಶೇ 100% ರಷ್ಟು ಮಾಡಿದ್ದರು ಆದರೆ ಈ ವರ್ಷ ಅಂತಹ nಸಾಧನೆಯನು ಕಂಡುಬಂದಿಲ್ಲ ಆದರೂ; ಸಹ
ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿನಿಗಳು ಹೆಣ್ಣು ಮಕ್ಕಳೇಸ್ಟ್ರಾಂಗು ಗುರು ಎಂಬಂತೆ ತಾಲೂಕಿಗೆ ಪ್ರಥಮ ಸ್ಥಾನವನ್ನು
.ಭಾಗ್ಯಶ್ರೀ ಸುರೇಶ್ ನಾಯ್ ಐಪಿಎಸ್ ಮಳಗಿ 614 ಅಂಕಗಳನ್ನು ಪಡೆದುಕೊಂಡಿದ್ದರೆ, ದ್ವಿತೀಯ ಸ್ಥಾನವನ್ನು .ಪರ್ವೀನ್ ಕೌಸರ್ ಅಬ್ದುಲ್ ಕರೀಂ ನರೇಗಲ್
ಮೌಲಾನಾ ಆಜಾದ್ ಪ್ರೌಢಶಾಲೆ ಮುಂಡಗೋಡ 611 ಅಂಕಗಳಿಂದ ಪಡೆದುಕೊಂಡಿದ್ದರೆ. ತೃತೀಯ ಸ್ಥಾನವನ್ನು .ಸವಿತಾ ಶಿವಪ್ಪ ಮತ್ತಿಗಟ್ಟಿ ಇಂದಿರಾ ಗಾಂಧಿ ವಸತಿ ಶಾಲೆ ಪಾಳ ಇವರು 604 ಅಂಕಗ ಳಿಂದ ಪಡೆದುಕೊಂಡಿದ್ದಾಳೆ ಈ ಸಾಧನೆಯನ್ನು ಕಂಡು Beo ಸುಮಾ ಮೇಡಂರವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಶಾಲೆಗಳ ಶೇಕಡಾ ಫಲಿತಾಂಶ: ಪಟ್ಟಣದ ಸ.ಪ.ಪೂ.ಕಾಲೇಜ ಶೇಕಡ 33 ರಷ್ಟು, ದೇವಕ್ಕ ಚಾಯಪ್ಪ ಕಲಾಲ
ಸರಕಾರಿ ಪ್ರೌಢ ಶಾಲೆಯ ಚಿಗಳ್ಳಿ ಶೇ 63., ಸರಕಾರಿ ಪ್ರೌಢ ಶಾಲೆ ಹುನಗುಂದ ಶೇ87ರಷ್ಟು, ಸ. ಪ್ರೌಡ ಶಾಲೆ ಮೈನಳ್ಳಿ ಶೇ 75ರಷ್ಟು, ಸರಕಾರಿ ಪ್ರೌಢ ಶಾಲೆ ಕಾತೂರ
ಶೇ 81ರಷ್ಟು, ಕೆ.ಪಿ.ಎಸ್ ಪ್ರೌಢ ವಿಭಾಗ ಮಳಗಿ, ಶೇ.62. ಸರಕಾರಿ ಪ್ರೌಢ ಶಾಲೆ ಅಂದಲಗಿ ಶೇ.93ರಷ್ಟು, ಸರಕಾರಿ ಉರ್ದು ಶಾಲೆ ಪಾಳಾ ಶೇ 76ರಷ್ಟು, ఇందిರಾ ಗಾಂಧಿ ವಸತಿ ಶಾಲೆ ಪಾಳಾ
ಶೇ.97ರಷ್ಟು, ಮುರಾರ್ಜಿ ವಸತಿ ಶಾಲೆ ಶೇ. 82ರಷ್ಟು, ಮೌಲಾನಾ ಆಜಾಧ ಶಾಲೆ ಶೇ. 95ರಷ್ಟು, ಆದಿಜಾಂಭವ ಪ್ರೌಢ ಶಾಲೆ ಶೇ.42ರಷ್ಟು, ಇಂದೂರ ಪ್ರೌಢ ಶಾಲೆ ಶೇ. 55 ರಷ್ಟು, ಲೋಟಸ್ ಪ್ರೌಢ ಶಾಲೆ ಶೇ 76ರಷ್ಟು, ಲೊಯೋಲಾ ಪ್ರೌಢ ಶಾಲೆ ಕರಗಿನಕೊಪ್ಪ ಶೇ. 84ರಷ್ಟು, ಮಹಾತ್ಮಾಜಿ ಪ್ರೌಡ ಶಾಲೆ ಪಾಳಾ ಶೇ. 71ರಷ್ಟು, ರೋಟರಿ ಪ್ರೌಢ ಶಾಲೆ ಶೇ.64ರಷ್ಟು, ದಸ್ತಿಗಿರಿಯಾ ಪ್ರೌಢ ಶಾಲೆ ಶೇ.43ರಷ್ಟು, ಜ್ಞಾನ ಪ್ರಜ್ಞಾ ಪ್ರೌಢ ಶಾಲೆ ಶೇ. 33ರಷ್ಟು ಹಾಗೂ ಬ್ಲೂಮಿಂಗ್ ಬಡ್ಸ್ ಪ್ರೌಢ ಶಾಲೆ ಶೇ. 94 ರಷ್ಟು ಫಲಿತಾಂಶ ಪಡೆದಿದೆ.
ಶೂನ್ಯ ಸಾಧನೆ: ದಸ್ತಗಿರಿಯಾ ಪ್ರೌಢ ಶಾಲೆಯ 13 ಜನ ಗಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ ಯಾರೂ ಸಹ ಪಾಸಾಗದೆ ಅನುತ್ತೀರ್ಣವಾಗಿರುವುದು ಬೇಸರದ ಸಂಗತಿಯಾಗಿದೆ.