ಬೆರ್ಹಾಂಪುರ: 14 ವರ್ಷಗಳ ಹಿಂದೆ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ತಂದು ಸಾಕಿಕೊಂಡಿದ್ದ ತಾಯಿ ಕೊಲೆಯಾಗಿದ್ದಾಳೆ. ಆದರೆ, ಕೊಲೆ ಮಾಡಿದ್ದು, ಅಂದು ಬೀದಿ ಬದಿಯಲ್ಲಿ ಬಿದ್ದಿದ್ದ ಬಾಲಕಿ ಎಂಬುದು ಕುತೂಹಲದ ಸಂಗತಿ
54 ವರ್ಷದ ಮಹಿಳೆ ತನ್ನ ಗಂಡನ ಜತೆಗೆ ದಾರಿಯಲ್ಲಿ ಬರುವಾಗ ಮೂರು ದಿನದ ಮಗುವೊಂದು ಸಿಕ್ಕಿತ್ತು. ಅದನ್ನು ತಂದು ಸಾಕಿಕೊಂಡಿದ್ದ ತಂದೆ ತಾಯಿ ಆಕೆಯನ್ನು ಕಾನೂನು ಪ್ರಕಾರ ದತ್ತು ಪಡೆದುಕೊಂಡಿದ್ದರು. ಕೆಲವೇ ದಿನಗಳಲ್ಲಿ ತಂದೆ ಸಾವನ್ನಪ್ಪಿದ್ದು, ಬಾಲಕಿಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮಹಿಳೆಯ ಶಾಲೆಯ ಪಕ್ಕದಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದರು.
14 ವರ್ಷದ ನಂತರ ಇದೀಗ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮಹಿಳೆಯ ಭಾಮೈದುನ ಬಾಲಕಿಯ ಮೊಬೈಲ್ ಚಾಟ್ ಪರಿಶೀಲನೆ ನಡೆಸಿದಾಗ, 14 ವರ್ಷದ ಹಿಂದೆ ಮಹಿಳೆ ದತ್ತು ಪಡೆದಿದ್ದ ಬಾಲಕಿಯೆ ಕೊಲೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, 14 ವರ್ಷದ ಬಾಲಕಿ ಹಾಗೂ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ದತ್ತು ತಾಯಿಯ ಜತೆ ಬೆಳೆಯುತ್ತಿದ್ದ ಬಾಲಕಿ, ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಆಕೆ ಇಬ್ಬರು ಯುವಕರ ಜತೆಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಈ ವಿಷಯ ತಿಳಿದ ತಾಯಿ, ಇದನ್ನು ವಿರೋಧಿಸಿದಾಗ, ಆಕೆಯನ್ನು ಆ ಇಬ್ಬರು ಗೆಳೆಯರ ಜತೆಗೆ ಸೇರಿಕೊಂಡು ಕೊಲೆ ಮಾಡುವ ಪ್ಲ್ಯಾನ್ ರೂಪಿಸಿದ್ದಳು ಎನ್ನಲಾಗಿದೆ.
ಒಂದು ದಿನ ಮೂವರು ಸೇರೆ ಮಹಿಳೆಯನ್ನು ಉರಿಸುಗಟ್ಟಿಸಿ ಸಾಯಿಸಿದ್ದರು. ನಂತರ ಆಕೆ ಎದೆನೋವಿನಿಂದ ಸತ್ತಿದ್ದಾಗಿ ಹೇಳಿದ್ದಳು. ಅನುಮಾನಗೊಂಡ ಕುಟುಂಬಸ್ಥರು ಬಾಲಕಿಯ ಮೊಬೈಲ್ ಪೋನ್ ಪರಿಶೀಲಿಸಿದಾಗ ಆಕೆ ಯುವಕರ ಜತೆಗೆ ಸಂಬಂಧ ಬೆಳೆಸಿರುವುದು ಮತ್ತು ಅವರೊಂದಿಗೆ ಕೊಲೆ ಮಾಡುವ ಕುರಿತು ನಡೆಸಿರುವ ಚಾಟ್ ಸಿಕ್ಕಿದೆ. ಇದರ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕಿ ತಾನೇ ತನ್ನ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.