ಅಪರಾಧ ಸುದ್ದಿ

68 ವರ್ಷದ ವೃದ್ಧನನ್ನು ಕೊಂದ ರಾಜಧಾನಿಯ ಬೀದಿನಾಯಿಗಳು !

Share It

ಬೆಂಗಳೂರು: ಬಿಬಿಎಂಪಿ ಬಿರಿಯಾನಿ ಹಾಕಲು ಮುಂದಾಗಿದ್ದ ಬೀದಿನಾಯಿಗಳ ದಾಳಿಗೆ ಈ ಬಾರಿ ಬಾಲಕರಲ್ಲ, ವಯೋವೃದ್ಧರೇ ಬಲಿಯಾಗಿದ್ದಾರೆ. ಕೊಡಿಗೇಹಳ್ಳಿಯಲ್ಲಿ ನಡೆದ ಘಟನೆಯಲ್ಲಿ 68 ವರ್ಷದ ವೃದ್ಧನನ್ನು ಬೀದಿನಾಯಿಗಳು ಕಚ್ಚಿ ಕೊಂದಿವೆ.

68 ವರ್ಷದ ಸೀತಪ್ಪ ಎಂಬುವವರು ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಬೀದಿನಾಯಿಗಳ ಹಿಂಡು ಅವರನ್ನು ಸುತ್ತುವರಿದು ಕೊಂದುಹಾಕಿವೆ. ಪಾರ್ಕ್ ಸಮೀಪದಲ್ಲಿದ್ದ ಟೀ ಅಂಗಡಿಯವರು ಇದನ್ನು ಗಮನಿಸಿ ಸೀತಪ್ಪ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.

ಕೊಡಿಗೇಹಳ್ಳಿಯ ಕೆಂಪೇಗೌಡ ಲೇಔಟ್‌ನಲ್ಲಿ ಸೀತಪ್ಪ ತಮ್ಮ ಕುಟುಂಬ ಸಮೇತ ವಾಸವಾಗಿದ್ದರು. ಇವರು ಮೂಲತಃ ರೈತರಾಗಿದ್ದು, ಈಗಲೂ ಹಸುಗಳನ್ನು ಸಾಕುತ್ತಿದ್ದಾರೆ. ತಮ್ಮ ದಿನನಿತ್ಯದ ಅಭ್ಯಾಸದಂತೆ ಅವರು ಬೆಳಗಿನ ಜಾವ 3.30ಕ್ಕೆ ವಾಕಿಂಗ್ ಹೋಗಿದ್ದರು. ಪ್ರತಿದಿನ 5 ಗಂಟೆಗೆ ಹೋಗುತ್ತಿದ್ದ ಅವರು, ಸಮಯ ಗೊತ್ತಾಗದೆ ಅಷ್ಟು ಬೇಗ ಹೋಗಿದ್ದರು ಎನ್ನಲಾಗುತ್ತಿದೆ.

ನಾಯಿಗಳ ದಾಳಿ ಸಂದರ್ಭದಲ್ಲಿ ಸುತ್ತಮುತ್ತಲಿನ ಜನರು ಅವುಗಳನ್ನು ಓಡಿಸುವ ಪ್ರಯತ್ನ ನಡೆಸಿದ್ದು, ನೀರು ಎಸೆಯುವುದು, ಗೇಟ್ ಬಡಿಯುವುದು ಮತ್ತು ಕೋಲುಗಳ ಮೂಲಕ ನಾಯಿಗಳನ್ನು ಓಡಿಸುವ ಪ್ರಯತ್ನ ನಡೆಸಿದರು ಎನ್ನಲಾಗಿದೆ. ಆದರೆ, ನಾಯಿಗಳು ಎಷ್ಟೇ ಕಿರುಚಾಡಿದರೂ ಬಿಡದೆ ವೃದ್ಧರ ಮುಖ, ಕೈ ಹಾಗೂ ಕಾಲುಗಳನ್ನು ಕಚ್ಚಿದ್ದವು, ಅತಿಯಾದ ರಕ್ತಸ್ರಾವದಿಂದಾಗಿ ಸೀತಪ್ಪ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


Share It

You cannot copy content of this page