ಬೆಂಗಳೂರು: ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆಗೆ ಬಿಟಿಎಂ ಕ್ಷೇತ್ರದ ಶಾಸಕರೂ ಆದ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮುನ್ನುಡಿ ಬರೆದಿದ್ದು, ಉಚಿತವಾಗಿ ಮಣ್ಣಿನ ಗಣೇಶ ವಿಗ್ರಹಗಳನ್ನು ವಿತರಣೆ ಮಾಡಲಿದ್ದಾರೆ.
ಕಳೆದ 15 ವರ್ಷಗಳಿಂದ ಸಚಿವ ರಾಮಲಿಂಗಾರೆಡ್ಡಿ ಮತ್ತು ಸೌಮ್ಯರೆಡ್ಡಿ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಾ ಬಂದಿದ್ದಾರೆ. POP ಗಣಪಗಳ ವಿಸರ್ಜನೆಯಿಂದ ಮಾಲಿನ್ಯಕ್ಕೆ ಅದರಲ್ಲೂ ಜಲ ಮಾಲಿನ್ಯವಾಗುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟುವುದು ಮತ್ತು ಅಂತರ್ಜಲದ ಗುಣಮಟ್ಟಕ್ಕೆ ಯಾವುದೇ ಹಾನಿಕಾರಕವಾಗದಂತೆ, ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುವ ಈ ಮಣ್ಣಿನ ಗಣಪತಿ ಸ್ಥಾಪನೆ ಮತ್ತು ವಿಸರ್ಜನೆ ಉಪಕ್ರಮವು, ಪರಿಸರ ಸ್ನೇಹಿಯಾಗಿದೆ.

ರಾಮಲಿಂಗಾರೆಡ್ಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಮತ್ತು ಸೌಮ್ಯರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ರವರ ನೇತೃತ್ವದಲ್ಲಿ ಉಚಿತವಾಗಿ ಮಣ್ಣಿನ ಗಣೇಶಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ನಾಳೆ ವಿತರಣೆ ಮಾಡಲಿದ್ದಾರೆ.
ದಿನಾಂಕ: 26.08.2025 ರಂದು ಬೆಳಿಗ್ಗೆ 8.30 ಕ್ಕೆ
ಶಾಸಕರ ಕಛೇರಿ, ಕೋರಮಂಗಲ
ಬೆಳಿಗ್ಗೆ 9.00 ಗಂಟೆಗೆ
ಎಲ್. ಐ. ಸಿ ಕಾಲೋನಿ, ಜಯನಗರ,
ಶ್ರೀ ನಾಗರಾಜ್ ರವರನೇತೃತ್ವದಲ್ಲಿ
ಬೆಳಿಗ್ಗೆ 9.30 ಕ್ಕೆ
ಸಾರಕ್ಕಿ, ಇಂದಿರಾಗಾಂಧಿ ಪ್ರತಿಮೆ ಬಳಿ
ಅರುಣ್ ಕುಮಾರ್ ರವರ ನೇತೃತ್ವದಲ್ಲಿ ಉಚಿತವಾಗಿ ಗಣಪತಿಗಳ ವಿತರಣೆ ನಡೆಯಲಿದೆ.

