ಅಪರಾಧ ಸುದ್ದಿ

ಪರಪ್ಪನ ಅಗ್ರಹಾರ: ಜೈಲು ವಾರ್ಡನ್​ನಿಂದಲೇ ಮಾದಕ ವಸ್ತುಗಳ ಪೂರೈಕೆ

Share It

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಜೈಲು ವಾರ್ಡನ್​ನಿಂದಲೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನೈಟ್ ಶಿಫ್ಟ್​ನಲ್ಲಿ ಪರಪ್ಪನ ಅಗ್ರಹಾರ ವಾರ್ಡನ್ ಆಗಿದ್ದ ಕಲ್ಲಪ್ಪ ಕೈದಿಗಳಿಗೆ ತಂಬಾಕು, ಮಾದಕ ವಸ್ತು ಪೂರೈಸುತ್ತಿದ್ದ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಂದ ಆರೋಪಿ ಕಲ್ಲಪ್ಪನನ್ನು ಬಂಧಿಸಲಾಗಿದೆ. ಬಂಧಿತನಿAದ ಖಾಕಿ ಪ್ಯಾಂಟ್​ನಲ್ಲಿ ಸೆಲ್ಲೋಟೇಪ್ ಸುತ್ತಿ ಇಟ್ಟಿದ್ದ ೧೦೦ ಗ್ರಾಂ ಆಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ.
ಸದ್ಯ ಪೊಲೀಸರು ಕಲ್ಲಪ್ಪನನ್ನ ವಿಚಾರಣೆ ಮಾಡುತ್ತಿದ್ದಾರೆ.

ಯಾರಿಂದ ಮಾದಕವಸ್ತು ಖರೀದಿಸಿದ್ದ, ಯಾರಿಗೆ ಪೂರೈಸುತ್ತಿದ್ದ ಎಂದು ತನಿಖೆ ಮಾಡಲಾಗುತ್ತಿದೆ. ಮಾಜಿ ಸೈನಿಕರ ಕೋಟಾದಲ್ಲಿ ೨೦೧೮ರಲ್ಲಿ ಕಾರಾಗೃಹ ಇಲಾಖೆಗೆ ಸೇರಿದ್ದ ಆರೋಪಿ, ಕೆಲ ತಿಂಗಳಿAದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು.
ಸೆ.೭ರ ಸಂಜೆ ಜೈಲಿನ ಡ್ಯೂಟಿಗೆ ಬರುವ ವೇಳೆ ಸಿಐಎಸ್​​ಎಫ್​​ ಸಿಬ್ಬಂದಿಗಳಿAದ ಪ್ರವೇಶ ದ್ವಾರದ ಬಳಿ ಕಲ್ಲಪ್ಪನ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಅವರ ಜೇಬಿನಲ್ಲಿ ತಂಬಾಕು ಮತ್ತು ಆಶಿಶ್ ಆಯಿಲ್ ಪತ್ತೆ ಆಗಿದೆ.

ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಹಿನ್ನಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ಕೂಡ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಮ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ, ತಂಬಾಕು ಪ್ಯಾಕೇಟ್ಸ್, ಸುಣ್ಣದ ಡಬ್ಬಿ, ಡೈರಿಗಳು, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ ಸೇರಿ ಕಬ್ಬಿಣದ ರಾಡ್​ಗಳು ಕೂಡ ಪತ್ತೆಯಾಗಿದ್ದವು.


Share It

You cannot copy content of this page