ಶಿರಸಿ: ಬನವಾಸಿ ರಸ್ತೆಯ ಕೆರೆಕೊಪ್ಪ ಗ್ರಾಮದ ಮನೆಯೊಂದರ ಬಾವಿಗೆ ಬಿದ್ದ ಚಿರತೆ
ಶಿರಸಿ : ತಾಕೂಕಿನ ಬನವಾಸಿ ರಸ್ತೆಯ ಕೆರೆಕೊಪ್ಪ ಗ್ರಾಮದ ಸುರೇಶ ಹೆಗಡೆ ಎಂಬುವವರ ಮನೆಯ ಬಾವಿಗೆ ಭಾನುವಾರ ನಸುಕಿನ ವೇಳೆ ಚಿರತೆಯೊಂದು ಬಿದ್ದಿರುವ ಘಟನೆ ನಡೆದಿದೆ.
ಈ ಬಗ್ಗೆ ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಬಾವಿಯೊಳಗಡೆ ಬಿದ್ದ ಚಿರತೆ ಮೇಲೆ ಬರಲಾಗದೆ ಒದ್ದಾಡಿದೆ. ಚಿರತೆ ರಕ್ಷಣೆಗಾಗಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.

