ಅಪರಾಧ ಸುದ್ದಿ

ರಿಪೀಸ್ ಪಟ್ಟಿಯಿಂದ ಹೊಡೆದು ಪತಿಯಿಂದಲೇ ಪತ್ನಿಯ ಕೊಲೆ

Share It

ಮಂಡ್ಯ: ಎರಡು ವರ್ಷದ ಹಿಂದೆ ದೂರಾಗಿದ್ದ ಪತ್ನಿಯನ್ನು ಆಕೆಯ ಗಂಡನೇ ರಿಪೀಸ್ ಪಟ್ಟಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಳಲೆ ಗ್ರಾಮದಲ್ಲಿ ನಡೆದಿದೆ.

ಕಳಲೆ ದೊಡ್ಡಬೀದಿಯಲ್ಲಿ ವಾಸವಾಗಿದ್ದ ಸುಧಾ ಎಂಬಾಕೆಯೇ ಕೊಲೆಯಾದ ಮಹಿಳೆ. ಆಕೆಯ ಪತಿ ಮಲ್ಲಹಳ್ಳಿಯ ಮಹೇಶ್ ಕೊಲೆ ಮಾಡಿರುವಾತ. ಈ ಇಬ್ಬರು ೧೩ ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ಆದರೆ, ಸಂಸಾರದಲ್ಲಿ ನಡೆದ ಸಣ್ಣಪುಟ್ಟ ಗಲಾಟೆಗಳಿಗಾಗಿ ೨ ವರ್ಷಗಳಿಂದ ದೂರಾವಾಗಿದ್ದರು ಎನ್ನಲಾಗಿದೆ.

ಗಂಡನಿAದ ದೂರವಾಗಿದ್ದ ಸುಧಾ ಕಳಲೆ ಗ್ರಾಮದ ದೊಡ್ಡಬೀದಿಯಲ್ಲಿ ವಾಸವಾಗಿದ್ದರು. ನೆನ್ನೆ ರಾತ್ರಿ ಹೆಂಡತಿ ಮನೆಗೆ ಬಂದ ಮಹೇಶ್, ರಾತ್ರಿ ಗಲಾಟೆ ಶುರು ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ರಿಪೀಸ್ ಪಟ್ಟಿಯಿಂದ ಹೊಡೆದು ಕೊಂದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಪರಾರಿಯಾಗಿರುವ ಪತಿ ಮಹೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Share It

You cannot copy content of this page