ಅಪರಾಧ ಸುದ್ದಿ

ಉದ್ಯಮಿ ರಾಯ್ ಆತ್ಮಹತ್ಯೆ : ಡೆತ್ ನೋಟ್‌ಗಾಗಿ ಪೊಲೀಸರ ಹುಟುಕಾಟ

Share It

ಬೆಂಗಳೂರು: ಐಟಿ ದಾಳಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಸಿ.ಜೆ.ರಾಯ್ ಅವರ ಕಚೇರಿಗೆ ದೌಡಾಯಿಸಿರುವ ಪೊಲೀಸರು, ಯಾವುದಾದರೂ ಡೆತ್ ನೋಟ್ ಇದೆಯಾ ಎಂದು ಹುಟುಕಾಟ ಆರಂಭಿಸಿದ್ದಾರೆ.

ಸಿ.ಜೆ. ರಾಯ್ ಅವರು ಐಟಿ ದಾಳಿ ನಡೆದ ವೇಳೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗಾದರೂ ಮೆಸೇಜ್ ಮಾಡಿರಬಹುದಾ? ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಸುಳಿವು ನೀಡಿರಬಹುದಾ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಾ ಇದ್ದಾರೆ.

ಸಿ.ಜೆ.ರಾಯ್ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಅಶೋಕ್ ನಗರ ಪೊಲೀಸರು, ಅವರ ಕೊಠಡಿ ಸೇರಿದಂತೆ ಕಚೇರಿಯನ್ನು ಹದ್ದುಬಸ್ತಿನಟ್ಟಿಲ್ಲಿದ್ದಾರೆ. ಅಲ್ಲಿ ಯಾವುದಾದರೂ ಡೆತ್ ನೋಟ್ ಇದೆಯಾ ಎಂದು ಹುಟುಕಾಟ ನಡೆಸುತ್ತಿದ್ದಾರೆ.


Share It

You cannot copy content of this page