ನವದೆಹಲಿ: ಕೇಂದ್ರದ ಮಲತಾಯಿ ಧೋರಣೆ ಮುಂದುವರಿದಿದೆ. ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಮುಂದುವರಿಸಿದೆ ಎಂದು ಹಾಸನದ ಸಂಸದ ಶ್ರೇಯಸ್ ಪಟೇಲ್ ಟೀಕಿಸಿದ್ದಾರೆ.
ಹಾಸನ ಜಿಲ್ಲೆಗೆ ಐಐಟಿ ನಿರೀಕ್ಷೆ ಮಾಡಲಾಗಿತ್ತು. ಕಾಡಾನೆ ಮತ್ತು ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರದಿಂದ ನೆರವನ್ನು ನಿರೀಕ್ಷಿಸಲಾಗಿತ್ತು. ಆದರೆ, ಅದ್ಯಾವುದು ಸಾಧ್ಯವಾಗಿಲ್ಲ. ಕೇಂದ್ರ ವಿತ್ತ ಸಚಿವರು ತಮ್ಮ ಹಿಂದಿನ ಮಲತಾಯಿ ಧೋರಣೆಯನ್ನು ಮುಂದುವರಿಸಿದ್ದಾರೆ ಎಂದಿದ್ದಾರೆ.
ಮಿತ್ರ ಪಕ್ಷ ಜೆಡಿಎಸ್ ಹಾಸನದಲ್ಲಿ ಅಷ್ಟೊಂದು ದೊಡ್ಡ ಸಮಾವೇಶ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ಅವರು ಮಾಡಿದ ಸಮಾವೇಶದಿಂದ ಹಾಸನದ ಜನತೆಗೆ ಆಗಿದ್ದೇನು? ಕೇಂದ್ರ ಮಂತ್ರಿಗಳು ವಿತ್ತಸಚಿವರಿಗೆ ಹಾಸನ ಜಿಲ್ಲೆಯ ಅಗತ್ಯಗಳ ಬಗ್ಗೆ ಯಾಕೆ ಗಮನ ಸೆಳೆಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.

