ಅಪರಾಧ ರಾಜಕೀಯ ಸುದ್ದಿ

ನಾನು ಆತ್ಮಹತ್ಯೆ ಮಾಡಿಕೊಂಡ್ರೆ ಐಟಿ ಅಧಿಕಾರಿಗಳೇ ಕಾರಣ:ಕೆಜಿಎಫ್ ಬಾಬು

Share It

ಬೆಂಗಳೂರು: ಐಟಿ ಅಧಿಕಾರಿಗಳ ಕಿರುಕುಳದಿಂದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲಿ ಮತ್ತೊಬ್ಬ ಉದ್ಯಮಿ ಐಟಿ ಕಿರುಕುಳದಿಂದ ಬೇಸತ್ತಿದ್ದು, ನಾನು ಆತ್ಮಹತ್ಯೆ ಮಾಡಿಕೊಂಡ್ರೆ ಐಟಿ ಅಧಿಕಾರಿಗಳೇ ಕಾರಣ ಎಂದು ಹೇಳಿದ್ದಾರೆ.

ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಕೆಜಿಎಫ್ ಬಾಬು ಈ ಹೇಳಿಕೆ ನೀಡಿದ್ದು, ನಾನು ೭ ಸಾವಿರ ಕೋಟಿ ಒಡೆಯನಾದ್ರೂ ನನಗೆ ನೆಮ್ಮದಿಯಿಲ್ಲ, ಅಧಿಕಾರಿಗಳು ನನಗೆ
ನೊಟೀಸ್ ಮೇಲೆ ನೊಟೀಸ್ ಕೊಟ್ಟು ಚಿತ್ರಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಆನೇಕ ಸಲ ಆಥ್ಮಹತ್ಯೆ ಮಾಡಿಕೊಂಡುಬಿಡಬೇಕು ಎಂದು ತೀರ್ಮಾನಿಸಿದ್ದೇನೆ. ಆದರೆ, ನನ್ನ ಮೂವರು ಮಕ್ಕಳ ಮುಖ ನೋಡಿಕೊಂಡು ಸುಮ್ಮನಾಗಿದ್ದೆ. ಈಗಲೂ ಕಿರುಕುಳ ಮುಂದುವರಿದಿದ್ದು, ಮುಂದೆ ನಾನು ಆತ್ಮಹತ್ಯೆ ಏನಾದ್ರೂ ಮಾಡಿಕೊಂಡರೆ, ಐಟಿ ಅಧಿಕಾರಿಗಳೇ ಕಾರಣ ಎಂದು ಹೇಳಿದ್ದಾರೆ.


Share It

You cannot copy content of this page