ಬೆಂಗಳೂರು: ಅನೈತಿಕ ಸಂಬಂಧದ ಆರೋಪದಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದರೆಂಬ ಆರೋಪದ ಮೇಲೆ ಟಿವಿ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಟಿವಿ ಜ್ಯೋತಿಷಿ ಕರುಣಾಕರ್ ಭಟ್ ಕೊಲೆ ಆರೋಪಿ ಸುಚಿತ್ರಾ ಅವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಹೀಗಾಗಿ, ಸುಚಿತ್ರಾ ಪತಿ ಮತ್ತು ಮಗಳು ಪೊಲೀಸ್ ದೂರು ನೀಡಿದ್ದರು. ಹೀಗಾಗಿ, ಮಹೇಶ್ ಮತ್ತು ವಸಂತ್ ಅವರ ಮೇಲೆ ಕಮಲಾಕರ್ ಭಟ್ ಸಹಚರರು ಹಲ್ಲೆ ನಡೆಸಿದ್ದರು.
ಹಲ್ಲೆಯ ನಂತರ ವಸಂತ್ ಎಂಬುವವರು ಸಾವನ್ನಪ್ಪಿದ್ದು, ಈ ಕೊಲೆ ಪ್ರಕರಣದಲ್ಲಿ ಸುಚಿತ್ರಾ ಅರೆಸ್ಟ್ ಆಗಿದ್ದರು. ಇದೀಗ ಆಕೆಯೊಂದಿಗೆ ಸ್ವಾಮೀಜಿಗೆ ಇರುವ ಸಂಬಂಧ ಬಯಲಾಗಿದ್ದು, ಕೊಲೆಯಲ್ಲಿ ಸ್ವಾಮೀಜಿಯ ಪಾತ್ರವಿರುವುದು ಗೊತ್ತಾಗಿದ್ದು, ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಿವಮೊಗ್ಗ ಮೂಲದ ಫೈಜಲ್ ಸೇರಿ ಮೂವರನ್ನು ಗಲಾಟೆ ಮಾಡಲು ಕರುಣಾಕರ್ ಭಟ್ ಕರೆಸಿಕೊಂಡಿದ್ದ. ಹೀಗಾಗಿ, ಕಮಲಾಕರ್ ಭಟ್ ಹಾಗೂ ಆತನ ಜತೆಗಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಹುಟುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

