ಬೆಂಗಳೂರು: ಭಾರತದಲ್ಲಿ ಇದೇ ಫೆಬ್ರವರಿ 15 ಭಾನುವಾರ ಶಿವರಾತ್ರಿ ದಿನದಿಂದಲೇ ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದರಲ್ಲೂ ನಮ್ಮ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ತಾಪಮಾನ 37° ಗಿಂತಲೂ ಹೆಚ್ಚಿರುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಸಿದೆ. ಆದ್ದರಿಂದ ಬರ ಬೇಸಿಗೆಯಲ್ಲಿ ಜನರು ಮಣ್ಣಿನ ಮಡಿಕೆಗಳನ್ನು ಖರೀದಿಸಿ ತಣ್ಣನೆಯ ನೀರು ಕುಡಿಯಲು ಸಜ್ಜಾಗಿದ್ದಾರೆ.

