ಹೊಸಕೋಟೆ : ತಾಲೂಕಿನ ಗಣಗಲೂರು ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದ ಮಹಿಳೆ ಕುಟುಂಬಸ್ಥರಿಗೆ ಶಾಸಕ ಶರತ್ ಬಚ್ಚೇಗೌಡ ಅವರು ಸೋಮವಾರ ಸರಕಾರದಿಂದ ಮಂಜೂರಾಗಿರುವ ಪರಿಹಾರದ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ಗಣಗಲೂರು ಗ್ರಾಮದಲ್ಲಿ ಮೇ 3 ರಂದು ಸಿಡಿಲಿಗೆ ಕುರಿಗಾಯಿ ರತ್ನಮ್ಮ ಮತ್ತು ಕುರಿಗಳು ಬಲಿಯಾಗಿದ್ದವು.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮಾತನಾಡಿ ಅಧಿಕಾರಿಗಳೊಂದಿಗೆ ಮೃತ ಮಹಿಳೆಪರಿಹಾರವಾಗಿ 4ಲಕ್ಷ ರೂ., ಕುರಿಗಳಿಗೆ ಪರಿಹಾರವಾಗಿ 1.2 ಲಕ್ಷ ರೂ. ಸೇರಿ ಒಟ್ಟು 5.2 ಲಕ್ಷ ರೂ. ಪರಿಹಾರದ ಚೆಕ್ ಹಾಗೂ ಸಾಂತ್ವಾನ ಪತ್ರವನ್ನು ಮೃತ ರತ್ನಮ್ಮರ ಗಂಡ ಚಿಕ್ಕಣ್ಣರಿಗೆ ನೀಡಿದರು.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಪ್ರಕರಣ ನಡೆದ ಕೇವಲ ಮೂರು ದಿನಗಳಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸು ವಂತೆ ಮಾಡಿದ್ದು, ಮೃತರ ಕುಟುಂಬಕ್ಕೆ ಈ ಹಣ ಆಸರೆಯಾಗಲಿದೆ. ಇನ್ನೂ 2ಲಕ್ಷ ರೂ. ಬರಬೇಕಿದ್ದು, ಪ್ರತಿ ಕುರಿಗೆ 5,000 ರೂ.ನಂತೆ 40 ಕುರಿಗಳಿಗೆ 2ಲಕ್ಷ ರೂ. ಅನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಅವರು ತಿಳಿಸಿದರು.