ಸುದ್ದಿ

ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ : ಕರ್ನಾಟಕ ಅಂಚೆ ವೃತ್ತಕ್ಕೆ ಎರಡನೇ ಸ್ಥಾನ

Share It

ಮೈಸೂರು: ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಮೊದಲ ದಿನದ ಸ್ಪರ್ಧೆಗಳಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕ ಅಂಚೆವಲಯ ಎರಡನೇ ಸ್ಥಾನ ಪಡೆದಿದೆ.

ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೇರಳ ಅಂಚೆ ವೃತ್ತದ ಕಲಾವಿದರು ಹತ್ತು ಪ್ರಥಮ, ಒಂದು ದ್ವಿತೀಯ ಬಹುಮಾನ ಪಡೆಯುವ ಮೂಲಕ ಒಟ್ಟು ೫೩ ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡರು. ಕರ್ನಾಟಕ ಅಂಚೆ ವೃತ್ತವು ಐದು ಪ್ರಥಮ, ಏಳು ದ್ವಿತೀಯ ಮತ್ತು ಒಂದು ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಳಕ ಎರಡನೇ ಸ್ಥಾನ ಪಡೆದುಕೊಂಡಿತು.

ಒಡಿಶಾ ಅಂಚೆ ವೃತ್ತದ ತಂಡವು ಎರಡು ಪ್ರಥಮ ಮತ್ತು ಒಂದು ದ್ವಿತೀಯ ಬಹುಮಾನ ಪಡೆದುಕೊಳ್ಳುವ ಮೂಲಕ ೧೪ ಅಂಕಗಳನ್ನು ಗಳಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.


Share It

You cannot copy content of this page