ಬೆಂಗಳೂರು: ಆಕಸ್ಮಿಕ ಬೆಂಕಿಯಿAದ ಟೆಕ್ಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಪಾತಕಿ ಆಕೆಯ ಶವದ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ.
ಆರೋಪಿ ಕರ್ನಾಲ್ ವಿಚಾರಣೆ ವೇಳೆ ಇಂತಹದ್ದೊAದು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಜ.16 ರಂದು ರಾಮಮೂರ್ತಿ ನಗರದಲ್ಲಿ ನಡೆದ ಘಟನೆಯಲ್ಲಿ ಮನೆಗೆ ಬೆಂಕಿಬಿದ್ದಿದ್ದು, ಹೊಗೆಯಿಂದ ಆ ಮನೆಯಲ್ಲಿ ವಾಸವಿದ್ದ ಟೆಕ್ಕಿ ಉಸಿರುಗಟ್ಟಿದ್ದಾರೆ ಎಂದು ಜನರು ಭಾವಿಸಿದ್ದರು.
ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿ, ಆಕೆ ಮೃತಪಟ್ಟಿರುವುದು ಗೊತ್ತಾಯಿತು. ಈ ವೇಳೆ ಬೆಂಕಿ ತಗುಲಿದ್ದ ಆಕಸ್ಮಿಕವಲ್ಲ ಎಂಬ ಅನುಮಾನದಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆಗಿಂತ ಕಡಿಮೆ ವಯಸ್ಸಿನ ಯುವಕನೊಬ್ಬ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂಬ ಮಾಹಿತಿ ಸಿಕ್ಕಿತ್ತು.
ಮಾಹಿತಿಯ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಂತೆ, ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಕೊಲೆಯನ್ನು ಮುಚ್ಚಿಡುವ ಕಾರಣದಿಂದ ಮನೆಗೆ ಬೆಂಕಿ ಹಾಕಿದ್ದಾಗಿ ಒಪ್ಪಿಕೊಂಡಿದ್ದ. ಇದೀಗ ವಿಚಾರಣೆ ವೇಳೆ ಒಂದೊAದೇ ಸತ್ಯ ಬಾಯ್ಬಿಡುತ್ತಿದ್ದು, ಆತ ಆಕೆಯ ಸಾವಿನ ನಂತರ ಶವದ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ.
ಮಂಗಳೂರು ಮೂಲದ ಶರ್ಮಿಳಾ ಒಂಟಿಯಾಗಿ ವಾಸವಿದ್ದು, ಎದುರುಮನೆಯಲ್ಲಿದ್ದ ಕರ್ನಾಲ್ ಆಕೆಗೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆಕೆ ವಿರೋಧಿಸಿದ್ದಕ್ಕೆ ಆಕೆಯ ಮನೆಗೆ ನುಗ್ಗಿ ಆಕೆಯನ್ನು ಹಿಡಿದುಕೊಳ್ಳಲು ಯತ್ನಿಸಿದ್ದ. ವಿರೋಧಿಸಿದ್ದಕ್ಕೆ ಬಲವಾಗಿ ಆಕೆಗೆ ಹೊಡೆದಿದ್ದ. ಆ ವೇಳೆ ಆಕೆಯ ತಲೆ ಸೋಪಾಗೆ ಬಡಿದು ತೀವ್ರ ರಕ್ತಸ್ರಾವವಾಗಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ.
ಆಕೆ ಪ್ರಾಣ ಕಳೆದುಕೊಂಡ ನಂತರ ಆಕೆಯನ್ನು ಶವವಾಗಿಯೇ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ, ಸಾಧ್ಯವಾಗದೆ ಇದ್ದಾಗ ಆಕೆಯನ್ನು ಮಂಚದ ಮೇಲೆಯೇ ಮಲಗಿಸಿ, ಸೋಫಾ, ಕರ್ಟನ್‌ಗಳಿಗೆ ಬೆಂಕಿ ಹಚ್ಚಿದ್ದ. ಹೀಗಾಗಿ, ಸುತ್ತಲಿನ ಜನರು ಆಕಸ್ಮಿಕವಾಗಿ ಬೆಂಕಿ ತಗುಲಿ ಆಕೆ ಸತ್ತಿದ್ದಾರೆ ಎಂದೇ ಭಾವಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ರಾಮಮೂರ್ತಿ ನಗರ ಪೊಲೀಸರು ನಡೆಸಿದ ಸಮಗ್ರ ತನಿಖೆಯಲ್ಲಿ ಹಂತಕನ ಒಂದೊAದೇ ಕೃತ್ಯಗಳು ಬಯಲಾಗುತ್ತಿದ್ದು, ದಿನಕ್ಕೊಂದು ಮಾಹಿತಿ ನೀಡುತ್ತಿದ್ದಾನೆ. ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

