ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ/ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2026-27 ನೇ ಸಾಲಿನ ಸಾಮಾನ್ಯ/ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಉಪಯೋಜನೆಯಡಿ ಸೇವಾಸಿಂಧು Sevasindhu.karnataka.gov.in ಮುಖಾಂತರ ದಿನಾಂಕ: 22.07.2026 ರಿಂದ ದಿನಾಂಕ:20.08.2026 ರ ಸಂಜೆ 5.30 ರವರೆಗೆ ಕಾಲಾವಕಾಶ ನೀಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ ಕಸಂವಾ 280 ಕಸಧ 2024 (ಭಾ-1) ದಿನಾಂಕ:31.10.2025 ರಲ್ಲಿನ ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್‌ಸೈಟ್: www.kannadasiri.karnataka.gov.in ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 080-24410574 /080-22213530/9986837037/080-22241325 ಅನ್ನು ಹಾಗೂ ಆಯಾ ಜಿಲ್ಲೆಯ ವ್ಯವಸ್ಥಾಪಕರು, ಸೇವಾಸಿಂಧು ಇವರನ್ನು ಸಂಪರ್ಕಿಸಬಹುದಾಗಿದೆ. ( ಸಮಯ : ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆ) (ನಿಗಧಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಅರ್ಜಿಗಳನ್ನು ನೇರವಾಗಿ ಇಲಾಖೆಯಲ್ಲಿ ಸ್ವೀಕರಿಸುವುದಿಲ್ಲ)

