ಅಪರಾಧ ಸುದ್ದಿ

ಕಿತ್ತೂರು ಸಮೀಪ ನಡುರಾತ್ರಿ ಕಾರು ಅಡ್ಡಗಟ್ಟಿ ದರೋಡೆ

Share It

ಬೆಳಗಾವಿ: ಕಿತ್ತೂರು ಸಮೀಪ ಕುಲವಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಕಾರು ಅಡ್ಡಗಟ್ಟಿ ದರೋಡೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈ ಮೂಲದ ಉದ್ಯಮಿ ವೈಭವ (30 ವರ್ಷ) ಎಂಬುವರ ಕಾರನ್ನು ಅಡ್ಡಗಟ್ಟಿ ಸುಮಾರು 15 ಗ್ರಾಂ ತೂಕದ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಂಟು ಜನರು ಇದ್ದ ಗುಂಪು ಕಸಿದುಕೊಂಡು ಪರಾರಿಯಾಗಿದೆ. ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸಿಕೊಂಡು ಮುಂದೆ ಸಾಗುತ್ತಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಎಂಟು ದರೋಡೆಕೋರರು ಕಾರನ್ನು ಅಡಗಟ್ಟಿದ್ದಾರೆ. ದೊಡ್ಡ ಕಲ್ಲು ಎಸೆದು ಕಾರು ನಿಲ್ಲಿಸಿದ್ದಾರೆ.

ನಂತರ ಕಾರನ್ನು ಸಂಪೂರ್ಣವಾಗಿ ಸುತ್ತುವರಿದು ಬೆದರಿಸಿದ ಈ ದರೋಡೆಕೋರರು ದರೋಡೆ ನಡೆಸಿದ ನಂತರ ಓಡಿ ಹೋಗಿದ್ದಾರೆ. ಅವರ ಬಳಿ ಎರಡು ರಿವಾಲ್ವರ್ ಇದ್ದವು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page