ಬೆಂಗಳೂರು: ಡೈರಿ ಸರ್ಕಲ್ ನಲ್ಲಿರುವ ಶ್ರೀ ಮಾರಮ್ಮ ದೇವಾಲಯದ ಜೀರ್ಣೋದ್ಧಾರ ಅಷ್ಟಬಂಧನ ಹಾಗೂ ಕುಂಭಾಬಿಷೇಕ ಕಾರ್ಯಕ್ರಮ ಮಾರ್ಚ್ 5 ಮತ್ತು 6 ರ ಶುಕ್ರವಾರದಂದು ನಡೆಯಲಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿಚರಾದ ರಾಮಲಿಂಗಾ ರೆಡ್ಡಿ ಅವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ ಅವರು ಕಾರ್ಯಕ್ರಮದಲ್ಲಿರಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಯಿಂದ ಕುಂಭಾಬಿಷೇಕ, ವಿಶೇಷ ಪೂಜೆಗಳು ನೆರವೇರಲಿವೆ.
ಗುರುವಾರ ಬೆಳಗ್ಗೆ 9 ಗಂಟೆಗೆ ವಿಘ್ನೇಶ್ವರ ಪೂಜೆ, ಪುಣ್ಯಾಹ ವಾಚನ, ದೇವತಾ ಅನುಜ್ಞೆ, ನವಗ್ರಹ ಹೋಮ, ಧನಪೂಜೆ, ವಾಸ್ತು ಹೋಮ, ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ, ಮಂಗಳಾರತಿ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ಯಾಗಶಾಲೆ ಪ್ರವೇಶ, ಕಲಶಾಕರ್ಷಣೆ, ಶ್ರೀ ಮಾರಮ್ಮ ದೇವಿ ಮೂಲಮಂತ್ರ ಹೋಮ, 108 ದ್ರವ್ಯ ಹೋಮ, ವೇದಪಾರಾಯಣ, ರಾತ್ರಿ 9 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ 10 ಗಂಟೆಗೆ ಅಷ್ಟಬಂಧನ ಸೇವೆ ನಡೆಯಲಿದೆ.
ಮಾರ್ಚ್ 6 ರ ಶುಕ್ರವಾರ ಗೋಪೂಜೆ, ಕಲಶ ಹೋಮ, ಗಣಪತಿ ನವಗ್ರಹ ಸುಬ್ರಹ್ಮಣ್ಯ ಹಾಗೂ ಶ್ರೀ ಮಾರಮ್ಮದೇವಿ ಮೂಲಮಂತ್ರ ಹೋಮ, ಬೆಳಗ್ಗೆ 9.20 ರಿಂದ 10 ಗಂಟೆಯವರೆಗೆ ಮೂಲ ದೇವರ ಕುಂಭಾಬಿಷೇಕ, ಬೆಳಗ್ಗೆ 11 ಗಂಟೆಗೆ ರುದ್ರಾಭಿಷೇಕ ಹಾಗೂ 12 ಗಂಟೆಗೆ ಮಹಾಮಂಗಳಾರತಿ ಅನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿವೆ.

