ಅಪರಾಧ ಸುದ್ದಿ

ದೇವರು ಬಂದಂತೆ ನಟಿಸಿ ದಲಿತ ದಂಪತಿಗೆ ಅವಮಾನ: ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶ

Share It

ತುಮಕೂರು: ದಲಿತ ಸಮುದಾಯದ ನವದಂಪತಿಗೆ‌ ಅವಮಾನಿಸಿ ದೇವಾಲಯದಿಂದ ಹೊರ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಾಂತಿ ಸಭೆ ನಡೆಸಲಾಗಿದ್ದು, ನಿಂದನೆಗೆ ಒಳಪಟ್ಟ ನವದಂಪತಿಗೆ ತುರುವೇಕೆರೆ ತಹಶೀಲ್ದಾರ್ ಎಂ.ಎನ್. ಕುಂ ಇ ಅಹಮದ್ ದೇವಾಲಯ ಪ್ರವೇಶ ಮಾಡಿಸಿದರು.

ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಫೆಬ್ರವರಿ 19ರಂದು ನಡೆದಿದ್ದ ಘಟನೆಗೆ ಸಂಬಂದಿಸಿ ಮಂಗಳವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ನವಜೋಡಿಯನ್ನು ಕೈಹಿಡಿದು ಅರಸಮ್ಮ ದೇವಿ ದೇವಾಲಯದ ಒಳಕ್ಕೆ ಕರೆದೊಯ್ದ ತಹಶೀಲ್ದಾರ್ ಎಂ.ಎನ್. ಕುಂ ಇ ಅಹಮದ್, ​ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷಕ್ಕೆ ಬ್ರೇಕ್ ಹಾಕಿದರು.

​ಪೊಲೀಸ್ ಬಂದೋಬಸ್ತ್ ನಡುವೆ ದಲಿತ ನವದಂಪತಿಗಳು ಗ್ರಾಮ ದೇವತೆ ದರ್ಶನ ಪಡೆದರು. ಮುಂದೆ ತಾಲೂಕಿನಲ್ಲಿ ಇಂತಹ ದೌರ್ಜನ್ಯ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಬಹು ಎಂದು ತಹಶೀಲ್ದಾರ್ ಇದೇ ವೇಳೆ ಎಚ್ಚರಿಕೆ ನೀಡಿದರು.

ಸರ್ಕಾರಿ ದೇವಾಲಯ ಯಾರ ಸ್ವತ್ತೂ ಅಲ್ಲ ಎಂದ ತಹಶೀಲ್ದಾರ್, ಮುಜರಾಯಿ ಇಲಾಖೆಗೆ ಸೇರಿದ ಅರಸಮ್ಮ ದೇಗುಲಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ. ಎಲ್ಲರೂ ಸೌಹಾರ್ದತೆಯಿಂದ ಇರುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.


Share It

You cannot copy content of this page