ಅಪರಾಧ ಸುದ್ದಿ

ರಿಯಲ್ ಎಸ್ಟೇಟ್ ಮತ್ಸರ : ಏಜೆಂಟ್ ಒಬ್ಬರ ಬರ್ಬರ ಕೊಲೆ

Share It

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಏಜೆಂಟ್ ವೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೊಲೆಗೆ 25 ಲಕ್ಷ ರು. ಸುಫಾರಿ ಪಡೆಯಲಾಗಿತ್ತು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.

ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಗ್ರಾಮದ ಗೋಪಾಲ್ ಕೊಲೆಯಾದ ವ್ಯಕ್ತಿ, ಅವರ ಶವವು ತಮಿಳುನಾಡಿ ಡೆಂಕನಕೋಟೆ ಬಳಿ ಪತ್ತೆಯಾಗಿದ್ದು, ಅವರ ಕೊಲೆಗೆ ಸುಫಾರಿ ನೀಡಿದ್ದ ಆರೋಪದಲ್ಲಿ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಮೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಗೋಪಾಲ್ ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಅವರ ಪತ್ನಿ, ಆನೇಕಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಏಳು ತಂಡಗಳನ್ನು ರಚನೆ ಮಾಡಲಾಗಿತ್ತು.

ವಿಚಾರಣೆ ಕೈಗೆತ್ತಿಕೊಂಡ ಪೊಲೀಸರಿಗೆ ಗೋಪಾಲ್ ಕೊಲೆಯಾಗಿ ತಮಿಳುನಾಡಿನಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಮೋಹನ್ ಹರೀಶ್, ಕಿರಣ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.


Share It

You cannot copy content of this page