ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಆರೋಪಿ ವಿನಯ್ ಮತ್ತು ವಕೀಲರ ನಡುವೆ ವಾಗ್ವಾದ ನಡೆದಿದೆ.
ಸಿಟಿ ಸೆಷನ್ ಕೋರ್ಟ್ ಆವರಣದಲ್ಲಿ ಇಂದು ದರ್ಶನ್ ಹಾಗೂ ಇತರ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಹತ್ತನೇ ಆರೋಪಿ ವಿನಯ್ ವಕೀಲರನ್ನು ಬದಲಾಯಿಸಲು ಮುಂದಾದ ಕಾರಣಕ್ಕೆ ವಾಗ್ವಾದ ನಡೆದಿದೆ.
ಸ್ಟೋನಿ ಬ್ರೂಕ್ ಕ್ಲಬ್ ಮಾಲೀಕನಾದ ವಿನಯ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹತ್ತನೇ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ವಿಚಾರಣೆ ವೇಳೆ ಆತ ತನ್ನ ವಕೀಲರನ್ನು ಬದಲಾಯಿಸಲು ಮುಂದಾಗಿದ್ದ ಎನ್ನಲಾಗಿದೆ.
ಹೀಗಾಗಿ, ಈವರೆಗೆ ಪ್ರಕರಣದಲ್ಲಿ ವಿನಯ್ ವಕೀಲರಾಗಿದ್ದ ನಟರಾಜ್ ಅವರಿಗೆ ಎನ್ಒಸಿ ಕೊಡುವಂತೆ ಕೇಳಿಕೊಂಡಿದ್ದು, ಈ ವಿಚಾರಕ್ಕೆ ನಟರಾಜ್ ಮತ್ತು ಮತ್ತೊಬ್ಬ ವಕೀಲರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.

