ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು “ಅಂಗಳದಲ್ಲಿ ತಿಂಗಳ ಪುಸ್ತಕ” ಯೋಜನೆಯಡಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವ ಸಂದರ್ಭದ ಅಂಗವಾಗಿ ಅವರ “ಕಾವ್ಯಾರ್ಥ ಚಿಂತನ – ಒಂದು ಅವಲೋಕನ” ಕೃತಿ ಕುರಿತು ಕಾರ್ಯಕ್ರಮ ಆಯೋಜಿಸಿದೆ.
ಹಿರಿಯ ಸಾಹಿತಿಗಳಾದ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅವರು ಈ ಕೃತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇದೇ ಶುಕ್ರವಾರ, ದಿನಾಂಕ:13.03.2026ರಂದು ಬೆಳಿಗ್ಗೆ 11:30ಗಂಟೆಗೆ ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಜ್ಞಾನ ಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ಇಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರಾದ ಕೆ.ಟಿ. ಶಾಂತಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ ಸಿ. ನಾಗಭೂಷಣ, ಡಾ. ಎಂ. ಸುಮಿತ್ರ, ಡಾ. ಬಿ. ಗಂಗಾಧರ, ಡಾ. ಡಿ. ಡೊಮಿನಿಕ್, ಡಾ. ಮುನಿಯಪ್ಪ, ಡಾ. ಚಿತ್ತಯ್ಯ ಪೂಜಾರ್ ಹಾಗೂ ಡಾ. ವಡ್ಡೆ ಹೇಮಲತಾ ಅವರುಗಳು ಉಪಸ್ಥಿತರಿರುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಎಚ್. ಶಶಿಕಲಾ ಅವರು ಭಾಗವಹಿಸಲಿದ್ದಾರೆ.

