ಬೆಂಗಳೂರು: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಅಶ್ವಿನಿ.ಜಿ, ತಹಶೀಲ್ದಾರ್ ಗ್ರೇಡ್-1, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಶ್ರೀಮತಿ ವರ್ಷಾ ವಡೆಯರ್, ವಿಶೇಷ ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ಇವರು ನ್ಯಾಯಾಲಯ ಪ್ರಕರಣಗಳನ್ನು ನಿಗಧಿತ ಅವಧಿಯೊಳಗೆ ನಿಯಮಾನುಸಾರ ಕ್ರಮವಹಿಸದೇ, ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ಪರಿಣಾಮ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ.

