ಅಪರಾಧ ಸುದ್ದಿ

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಆತ್ಮಹತ್ಯೆ

Share It

ಬೆಂಗಳೂರು ದಕ್ಷಿಣ: ಕೌಟುಂಬಿಕ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬಳು ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನಯನಾ(೧೯) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, ಆಕೆಗೆ ಇತ್ತೀಚೆಗಷ್ಟೇ ಗ್ರಾಮದ ಸುನೀಲ್ ಎಂಬಾತನ ಜತೆಗೆ ಮದುವೆಯಾಗಿತ್ತು. ಆಕೆ ಗರ್ಭಿಣಿಯಾಗಿದ್ದು, ಸುನೀಲ್ ಮತ್ತು ಅವರ ಕುಟುಂಬಸ್ಥರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಯನಾ ಪೋಷಕರು ಆರೋಪಿಸಿದ್ದಾರೆ.

ಮೈಮೇಲೆ ಡೀಸೆಲ್ ಸುರಿದುಕೊಂಡು ಮನೆಯ ಕೊಠಡಿಯಲ್ಲೇ ನಯನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಪತಿ ಸುಲೀನ್ ಮತ್ತು ನಯನಾಳ ಅತ್ತೆ ಮಾವನ ವಿರುದ್ಧ ಪೋಷಕರು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


Share It

You cannot copy content of this page