ಸುದ್ದಿ

ರಾಜ್ಯದಲ್ಲಿ ಗ್ಯಾಸ್, ಡೀಸೆಲ್ ಹಾಗೂ ಪೆಟ್ರೋಲ್​ಗೆ ಕೊರತೆ ಇಲ್ಲ : ಮಧು ಬಂಗಾರಪ್ಪ

Share It

ಶಿವಮೊಗ್ಗ : ರಾಜ್ಯದಲ್ಲಿ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್​ಗೆ ಯಾವುದೇ ಕೊರತೆ ಇಲ್ಲ. ಎಲ್ಲಾ ಕಡೆ ಲಭ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ನಗರದ ಗೋಪಾಲಗೌಡ ಬಡಾವಣೆ ನೇತಾಜಿ ವೃತ್ತದಿಂದ ಆಲ್ಕೊಳ ವೃತ್ತದವರೆಗೂ 100 ಅಡಿ ರಸ್ತೆಗೆ ಎಸ್. ಬಂಗಾರಪ್ಪ ಅವರ ಹೆಸರಿನ ನಾಮಫಲಕ ಉದ್ಟಾಟಿಸಿದರು. ನಂತರ ಗ್ಯಾಸ್ ಸಮಸ್ಯೆ ಕುರಿತು ಮಾತನಾಡಿದ ಅವರು, ಗ್ಯಾಸ್ ಕುರಿತು ಸದನದಲ್ಲಿ ಚರ್ಚೆ ನಡೆದಿದೆ. ಇದು ಅತ್ಯವಶ್ಯಕ ವಸ್ತುಗಳಾದ ಕಾರಣಕ್ಕೆ ಪೂರೈಸಬೇಕೆಂದು ಹೇಳಲಾಗಿದೆ. ಈ ಕುರಿತು ಕೇಂದ್ರ ಗಮನ ಹರಿಸಬೇಕಿದೆ ಎಂದರು.

ಸದ್ಯ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕಡೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಲಭ್ಯತೆ ಇದೆ. ಆತಂಕಕ್ಕೆ ಒಳಗಾದಾಗ ಎಲ್ಲರೂ ಒಟ್ಟಿಗೆ ಮುಗಿಬಿದ್ದಾಗ ಈ ರೀತಿಯ ಸಮಸ್ಯೆ ಆಗುತ್ತದೆ. ನಮ್ಮ ಜಿಲ್ಲೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ಬೇಸಿಗೆ ಪ್ರಾರಂಭವಾಗಿದೆ. ಈ ಕುರಿತು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿದ್ದೇವೆ. ಈ ಕುರಿತು ಮೇಲ್ಮನೆಯಲ್ಲಿ ಸದಸ್ಯರು ಹೇಳಿದ್ರು. ಚರ್ಚೆ ನಡೆಸಲಾಗಿದೆ. ಈ ಕುರಿತು ನಾನು ಹಿಂದೆಯೇ ಚರ್ಚೆ ನಡೆಸಿದ್ದೇವೆ. ಡಿಸಿ ಹಾಗೂ ಸಿಇಒ ಅವರ ಜೊತೆ ಚರ್ಚೆ ನಡೆಸಿದ್ದೇನೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆ ನೀಡಲಾಗಿದೆ. ಇದೆಲ್ಲಾ ದೊಡ್ಡ ಮಟ್ಟದ ಅಭಿವೃದ್ದಿನೇ ಆಗುತ್ತದೆ. ಅಧಿವೇಶನ ಇನ್ನೂ ನಡೆಯುತ್ತಿದೆ. ಸಿಎಂ ಅವರು ಇನ್ನೂ ಉತ್ತರ ಕೊಡುವುದು ಇದೆ. ಅವರು ಸಪ್ಲಿಮೆಂಟರಿಯಾಗಿ ಕೊಡುತ್ತಾ ಹೋಗುತ್ತಾರೆ. ಕೆಲವರು ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಇಕ್ಬಾಲ್‌ ಕೆಲಸ ಆಗಿಲ್ಲ. ನಾನು ಶರಾವತಿ ನದಿ ನೀರು ಕೇಳಿದ್ದೇನೆ. ನನ್ನ ಕೆಲಸ ಇನ್ನೂ ಉಳಿದಿದೆ. ಇಕ್ಬಾಲ್ ಜತೆ ಪಕ್ಷದವರು ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು.


Share It

You cannot copy content of this page