ಸುದ್ದಿ

ಆಡುಗೋಡಿ ಪೊಲೀಸ್ ಕ್ವಾಟ್ರಸ್ ನ ಕದಂಬ ಪಾರ್ಕ್ ಉದ್ಘಾಟನೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ

Share It

ಬೆಂಗಳೂರು: ಆಡುಗೋಡಿ ಪೊಲೀಸ್ ಕ್ವಾಟ್ರಸ್ ನ ಅನುಕೂಲಕ್ಕೆ ನೂತನವಾಗಿ ಅಭಿವೃದ್ಧಿ ಪಡಿಸಿದ ಕದಂಬ ಪಾರ್ಕ್ ಮತ್ತು ರಂಗಮಂಟಪವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿದರು.

ಆಡುಗೋಡಿ ಪೊಲೀಸ್ ಕ್ವಾಟ್ರಸ್ ನ ಕದಂಬ ಪಾರ್ಕ್ ಇಲ್ಲಿನ ಪೊಲೀಸ್ ಸಿಬ್ಬಂದಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಉದ್ಯಾನವಾಗಿದ್ದು, ಅದನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿದೆ. ಹೊಸ ಪಾದಚಾರಿ ಮಾರ್ಗ, ಬೆಂಚುಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿ ಶಾಸಕರ ವಿಶೇಷ ಅನುದಾನದಲ್ಲಿ ಪಾರ್ಕ್ ಅಭಿವೃದ್ಧಿ ಗೊಳಿಸಿದೆ.

ಇದೇ ಸಂದರ್ಭದಲ್ಲಿ ಪೊಲೀಸ್ ವಸತಿ ಗೃಹಗಳ ಸಮುಚ್ಚಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತಹ ರಂಗವೇದಿಕೆಯನ್ನು ಇದೇ ಸಂದರ್ಭದಲ್ಲಿ ಸಚಿವರು ಉದ್ಘಾಟಿಸಿದರು. ಮಹಿಳಾ ದಿನಾಚರಣೆಯ ಅಂಗವಾಗಿ ವಸತಿ ಗೃಹದ ನಿವಾಸಿ ಮಹಿಳೆಯರನ್ನು ರಾಮಲಿಂಗಾ ರೆಡ್ಡಿ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಮನಗರದ ಶಾಸಕ ಇಕ್ಬಾಲ್ ಹುಸೇನ್, ಮುಖಂಡರಾದ ಮೋಹನ್, ಮಂಜುನಾಥ್, ಗೋವರ್ದನ್ ರೆಡ್ಡಿ, ಆನಂದ್, ಉದಯ್ ಮೊದಲಾದವರು ಇದ್ದರು.


Share It

You cannot copy content of this page