ಬೆಂಗಳೂರು: ಜಿಬಿಎ ಚುನಾವಣೆಗೆ ಅಗತ್ಯ ಸಿದ್ಧತೆಗಳೆಲ್ಲ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದವರನ್ನೆಲ್ಲ ಸಭೆ ಕರೆಯುವ ಮೂಲಕ ಚುನಾವಣೆ ನಡೆಸುವ ಮುನ್ಸೂಚನೆಯನ್ನು ಕಾಂಗ್ರೆಸ್ ನೀಡಿದೆ.
ಬೆಂಗಳೂರು ನಗರ ಉಸ್ತುವಾರಿಯೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದು ಸಂಜೆ ೪ ಗಂಟೆಗೆ ಸಭೆ ಕರೆದಿದದ್ದು, ಟಿಕೆಟ್‌ಗಾಗಿ ಅರ್ಜಿ ಸಲ್ಲಿರುವ ಆಕಾಂಕ್ಷಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ. ಪಕ್ಷದ ವತಿಯಿಂದ ಸರ್ವೇ ನಡೆಸಲಾಗುತ್ತಿದೆ. ಗೆಲ್ಲುವ ಅಭ್ಯರ್ಥಿಗೆ ಅಂತಿಮವಾಗಿ ಟಿಕೆಟ್ ನೀಡಲಾಗುತ್ತದೆ. ಆಗ ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಲಿದ್ದಾರೆ.
ಈ ಜತೆಗೆ, ಇಂದಿನಿAದಲೇ ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಹಾಗೂ ಜನರ ಮೆಚ್ಚುಗೆ ಗಳಿಸುವ ಪ್ರಯತ್ನಕ್ಕೆ ನೀವೆಲ್ಲರೂ ಮುಂದಾಗಿ. ಜನ ಮೆಚ್ಚುವ ನಾಯಕ ಅಭ್ಯರ್ಥಿಯಾಗುವುದು ಖಚಿತ. ಹೀಗಾಗಿ, ಪಕ್ಷ ಸಂಘಟನೆಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ನೀವೆಲ್ಲರೂ ದುಡಿಯಿರಿ ಎಂದು ಡಿಸಿಎಂ ಕರೆ ನೀಡಲಿದ್ದಾರೆ.
ಟಿಕೆಟ್ ಯಾರಿಗೆ ಸಿಗಲಿದೆಯೋ ಎಂಬ ಅನುಮಾನದಲ್ಲಿ ಅನೇಕ ವಾರ್ಡ್ಗಳಲ್ಲಿ ನಾಯಕರು ನಿರಾಸೆಯಿಂದ ಇದ್ದಾರೆ. ಹೀಗಾಗಿ, ಪಕ್ಷಕ್ಕೆ ಅಂತಹ ಜಾಗಗಳಲ್ಲಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಅವರೆನ್ನೆಲ್ಲ ಎಚ್ಚರಗೊಳಿಸು, ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಡಿಸಿಎಂ ಕರೆದಿರುವ ಸಭೆ ನಿರ್ಣಾಯಕವಾಗಲಿದೆ.

