ರಾಜಕೀಯ ಸುದ್ದಿ

ಒಡಿಸ್ಸಾ ಶಾಸಕರ ಭೇಟಿಗೆ ಅಪರಿಚಿತರ ಯತ್ನ: ಕುದುರೆ ವ್ಯಾಪಾರದ ಶಂಕೆ ವ್ಯಕ್ತಪಡಿಸಿದ ಕಾಂಗ್ರೆಸ್

Share It

ಬೆಂಗಳೂರು : ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಒಡಿಸ್ಸಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಲ್ಲಿಟ್ಟಿದ್ದು, ಅವರ ಭೇಟಿಗೆ ನಾಲ್ವರು ಅಪರಿಚಿತರು ಪ್ರಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ಮೈಸೂರು ಹೆದ್ದಾರಿಯ ವಂಡರ್ ಲಾ ರೆಸಾರ್ಟ್ನಲ್ಲಿ ಒಡಿಸ್ಸಾದ ಕಾಂಗ್ರೆಸ್ ಶಾಸಕರನ್ನು ಇರಿಸಲಾಗಿದೆ. ಅಲ್ಲಿಗೆ ಕರ್ನಾಟಕದ ಒಬ್ಬ ವ್ಯಕ್ತಿಯ ಜತೆಗೆ ಮತ್ತೇ ಮೂವರು ಅಪರಿಚಿತರು ಆಗಮಿಸಿದರು ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್ ಶಾಸಕರು ಅವರ ಭೇಡಿಕೆಗೆ ಒಪ್ಪದೆ ಅವರನ್ನು ಹಿಡಿಯುವ ಪ್ರಯತ್ನ ಮಾಡಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ಅವರ ಬಳಿ ಪರಿಶೀಲನೆ ನಡೆಸಿದಾಗ ಖಾಲಿ ಚೆಕ್ ಗಳು ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ. ಬಿಜೆಪಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಇಲ್ಲಿಗೆ ಕರೆತಂದಿದ್ದರೂ, ಇಲ್ಲಿಂದಲೂ ಅವರನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ದೂರಿದೆ.


Share It

You cannot copy content of this page