ಬೆಂಗಳೂರು: ಜಿಬಿಎ ವ್ಯಾಪಿಯ ಶಾಸಕರು ಮತ್ತು ಸಚಿವರ ಸಭೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಿತು.
ಜಿಬಿಎ ಬಜಟ್ ಗೆ ಪೂರ್ವಭಾವಿ ಸಭೆ ನಡೆದಿದ್ದು, ಸಭೆಯಲ್ಲಿ ಬಜೆಟ್ ತಯಾರಿ ಜತೆಗೆ ಜಿಬಿಎಗೆ ಚುನಾವಣೆ ನಡೆಸುವ ಕುರಿತು ಶಾಸಕರು ಪ್ರಶ್ನೆ ಮಾಡಿದರು ಎನ್ನಲಾಗಿದೆ. ಇದಕ್ಕೆ ಉತ್ತರ ನೀಡಿದ ಉಸ್ತುವಾರಿ ಸಚಿವರೂ ಆದ ಡಿಸಿಎಂ, ಚುನಾವಣೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶೀರ್ಘವೇ ಚುನಾವಣೆ ನಡೆಸುತ್ತೇವೆ ಎಂದರು ಎನ್ನಲಾಗಿದೆ.
ಐದು ಪಾಲಿಕೆಗಳು ಪ್ರತ್ಯೇಕವಾಗಿ ಬಜೆಟ್ ತಯಾರಿಯಲ್ಲಿ ತೊಡಗಿದ್ದು, ಏಪ್ರಿಲ್ ನಲ್ಲಿ ಜಿಬಿಎ ಬಜೆಟ್ ಮಂಡನೆಯಾಗಲಿದೆ. ಬಿಜೆಪಿ ಶಾಸಕರು ಕೂಡ ತಮ್ಮ ತಮ್ಮ ಅಭಿಪ್ರಾಯ ನೀಡಿದ್ದಾರೆ. ವಿರೋಧಪಕ್ಷದ ನಾಯಕ ಆರ್.ಅಶೋಕ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ.

