ರಾಜಕೀಯ ಸುದ್ದಿ

ಶಾಸಕರಿಗೂ ಬಯೋ ಮೆಟ್ರಿಕ್ ವ್ಯವಸ್ಥೆ: ಕಲಾಪ ತಪ್ಪಿಸಿಕೊಳ್ಳದಂತೆ ಕಡಿವಾಣ

Share It

ಬೆಂಗಳೂರು: ಇನ್ನು ಮುಂದೆ ವಿಧಾನಸಭೆ ಕಲಾಪದಲ್ಲಿ ಶಾಸಕರಿಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸ್ಪೀಕರ್ ಯು. ಟಿ. ಖಾದರ್ ತಿಳಿಸಿದ್ದಾರೆ.

ಶಾಸಕರ ಹಾಜರಾತಿಗೆ ಇನ್ಮುಂದೆ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇಷ್ಟು ದಿನ ಶಾಸಕರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದರು. ಇದೀಗ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದರು.‌

ವಿಧಾನಸಭೆಯಲ್ಲಿ ಬಹು ನಿರೀಕ್ಷಿತ ಕಾಗದರಹಿತ ಇ-ವಿಧಾನ ವ್ಯವಸ್ಥೆ ಜಾರಿ ಬಗ್ಗೆಯೂ ಸ್ಪೀಕರ್ ಮಾಹಿತಿ ನೀಡಿದರು. ಈ ಸಂಬಂಧ ಸರ್ಕಾರವೂ ಅನುಮತಿ ನೀಡಿದೆ. ಮುಂದಿನ ಮೂರು ತಿಂಗಳಲ್ಲಿ ಡಿಜಿಟಲ್ ವ್ಯವಸ್ಥೆ ತರಲಾಗುವುದು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಕಾಗದ ರಹಿತ ಇ-ವಿಧಾನ್ ಅನುಷ್ಠಾನ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ಹಣಕಾಸು ಗೊಂದಲ, ಕೇಂದ್ರ ಹಾಗೂ ರಾಜ್ಯದ ನಡುವೆ ಅನುದಾನ ಹಂಚಿಕೆ ಸಂಬಂಧ ಉಂಟಾಗಿರುವ ಗೊಂದಲದಿಂದ ಇ-ವಿಧಾನ್ ಜಾರಿ ವಿಳಂಬವಾಗಿತ್ತು. ಇದೀಗ ಕಾಗದ ರಹಿತ ಕಲಾಪದ ವ್ಯವಸ್ಥೆ ಜಾರಿ ಸಂಬಂಧ ಸ್ಪೀಕರ್​ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.


Share It

You cannot copy content of this page