ಮುಂಬೈ: ಗ್ಯಾಸ್ ಸಿಲೀಂಡರ್ಗಾಗಿ ಬಿಸಿನಿಲ್ಲಿ ನಾಲ್ಕು ಗಂಟೆಗಳ ಕಾಲ ಕಾದು ನಿಂತಿದ್ದ ಮಾಜಿ ಸರಪಂಚ್ ವೊಬ್ಬರು ಮೃತಪಟ್ಟಿರುವ ಘಟನೆ ವಿದರ್ಭದ ಅಕೋಲಾ ಪಟ್ಟಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಂಕರರಾವ್ ಸಿರ್ಸತ್ ಎಂದು ಗುರುತಿಸಲಾಗಿದ್ದು, ಇವರು ಅಕೋಲಾ ಪಟ್ಟಣದಿಂದ 20 ಕಿ.ಮೀ ದೂರದಲ್ಲಿರುವ ಅನ್ವಿ ಮಿರ್ಜಾಪುರ ಗ್ರಾಮದ ಮಾಜಿ ಸರಪಂಚ್ ಎಂದು ತಿಳಿದು ಬಂದಿದೆ.
ಶಮಖರರಾವ್ ಅವರಿಗೆ 54 ವರ್ಷ ವಯಸ್ಸಾಗಿದ್ದು, ಪಟ್ಟಣದಲ್ಲಿ ವಾಸವಿರುವ ತಮ್ಮ ವಿಧವೆ ಸೊಸೆಗೆ ಸಿಲೀಂಡರ್ ಭರ್ತಿ ಮಾಡಿಸಲು ಸಮಸ್ಯೆಯಾದ ಕಾರಣಕ್ಕೆ ಬಂದು ಏಜೆನ್ಸಿಯ ಮುಂದೆ ಸುಮಾರು 4 ಗಂಟೆಗಳ ಕಾಲ ಸರತಿಯಲ್ಲಿ ನಿಂತಿದ್ದರು ಎನ್ನಲಾಗಿದೆ.
ನಗರದಲ್ಲಿ ಶನಿವಾರ 41.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಶಂಕರ್ ರಾವ್ ಅವರ ಸಾವಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಬಹುಜನ್ ಅಘಾಡಿಯ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಪ್ರತಿಕ್ರಿಯಿಸಿದ್ದು, ಸರಕಾರ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರೆ, ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

