ಸುದ್ದಿ

ಬಸ್ ಬೈಕ್ ನಡುವೆ ಅಪಘಾತ: ಸಜೀವ ದಹನವಾದ ಯುವಕ

Share It

ಸಿಂಧಗಿ: ಸಾರಿಗೆ ಬಸ್‌ಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದ್ದು, ಯುವಕನೊಬ್ಬ ಸಜೀವವಾಗಿ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ನಡೆದಿದೆ.

ಮೃತ ಯುವಕನನ್ನು ಎಂದು ಗುರುತಿಸಲಾಗಿದ್ದು, ಬಸ್ ಗೆ ಡಿಕ್ಕಿ ಹೊಡೆದ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಯುವಕ ಸಂಪೂರ್ಣವಾಗಿ ದಹನವಾಗಿದ್ದಾನೆ.

ಬಸ್ ಗೆ ಕೂಡ ಬೆಂಕಿ ಹರಡಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರು ಪಾರಾಗಿದ್ದಾರೆ. ಸಿಂಧಗಿ ಪೊಲೀಸರು ಯುವಕನ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಆತ ತನ್ನ ಸಾವಿಗೆ ವಿರೇಶ್ ನಂದೂರ್, ಚೈತ್ರಾ ನಂದೂಂರ್ ಮತ್ತು ತಮ್ಮ ಸಂಬಂಧಿಕರಾದ ನವೀಕುಮಾರ್ ಪಾಟೀಲ್ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾನೆ ಎನ್ನಲಾಗಿದ್ದು, ಪ್ರಕರಣದ ಕುರಿತು ಸಿಂಧಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page