ಕ್ರೀಡೆ ಸುದ್ದಿ

ತೆಲಂಗಾಣ ಸಿಎಂ ರೇವಂತ ರೆಡ್ಡಿ ಆಪ್ತರಿಂದ IPL ಟಿಕೆಟ್‌ಗಾಗಿ ಡಿಮ್ಯಾಂಡ್ : ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ಗೆ ಕರೆ

Share It

ಬೆಂಗಳೂರು: ನಾಳೆ ಚೆನ್ನೈ ಮತ್ತು ಆರ್‌ಸಿಬಿ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಟಿಕೆಟ್ ಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದುಕೊಂಡು ವ್ಯಕ್ತಿಯೊಬ್ಬ ಶಾಸಕ ಸುರೇಶ್ ಕುಮಾರ್‌ಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ.

ಚೆನ್ನೈ ಮತ್ತು ಆರ್‌ಸಿಬಿ ಪಂದ್ಯದ ಕ್ರೇಜ್ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಈ ನಡುವೆ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿದ್ದ ಎಂದು ಹೇಳಲಾಗಿದೆ.

ಆತ ತಾನು ರೇವಂತ್ ರೆಡ್ಡಿ ಸಂಬಂಧಿ, ಸಿಎಂ ಕಚೇರಿಯಿಂದ ನಿಮ್ಮ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು, ಐಪಿಎಲ್ ಟಿಕೆಟ್ ಕೊಡಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಸುರೇಶ್ ಕುಮಾರ್ ಅವರು, ಕೆಎಸ್‌ಸಿಎ ರಾಜ್ಯದ ಶಾಸಕರಿಗೆ ನೀಡುವ ತಲಾ ಮೂರು ಟಿಕೆಟ್ ನಿರಾಕರಿಸಿದ್ದರು.

ಅವರು ಆರ್‌ಸಿಬಿ ಪಂದ್ಯಕ್ಕೆ ನೀಡುವ ಟಿಕೆಟ್ ನಿರಾಕರಿಸಿದ್ದಾರೆ ಎಂಬ ಅಂಶವನ್ನು ಅರಿತ ವ್ಯಕ್ತಿಗಳೇ ಕರೆ ಮಾಡಿರಬಹುದು ಎನ್ನಲಾಗಿದೆ. ಒಟ್ಟಾರೆ, ತೆಲಂಗಾಣ ಸಿಎಂ ಕಚೇರಿಯ ಹೆಸರಿನಲ್ಲಿ ಶಾಸಕರಿಗೆ ಕರೆ ಮಾಡಿ, ಟಿಕೆಟ್ ಪಡೆಯುವ ಸಾಹಸ ನಡೆಸುವ ಮಟ್ಟಿಗೆ ಕ್ರಿಕೆಟ್ ಕ್ರೇಜ್ ಹೆಚ್ಚಾಗಿದೆ ಎನ್ನಬಹುದು.


Share It

You cannot copy content of this page