ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

Share It

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಖಾನಾಪುರ ತಾಲೂಕು ನಂದಗಡ ಗ್ರಾಮದ ಕಾಲೇಜು ರಸ್ತೆಯ ಕಲ್ಲಪ್ಪ ಪರಶುರಾಮ ಸುತಾರ (22) ಶಿಕ್ಷೆಗೊಳಗಾದ ಆರೋಪಿ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪಿರ್ಯಾದಿದಾರರ ಮಗಳು ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ ಆರೋಪಿತನು 19-04-2025 ರಂದು ನೊಂದ ಬಾಲಕಿಗೆ ಸುಮಾರು 2 ವರ್ಷದಿಂದ ಪರಿಚಯ ಮಾಡಿಕೊಂಡು ಅವಳಿಗೆ ಪೋನ್ ಮಾಡಿ ಮಾತನಾಡುತ್ತಿದ್ದಲ್ಲದೆ ಅವಳ ಹಿಂದೆ ಬಿದ್ದು ಅವಳ ತಲೆಕೆಡಿಸಿ ಅವಳಿಗೆ ಪ್ರೀತಿ ಮಾಡುತ್ತೇನೆ, ನಿನ್ನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ತನ್ನ ಮೋಟಾರ್ ಸೈಕಲ್ ಮೇಲಿಂದ ಅಪಹರಿಸಿಕೊಂಡು ಅನಮೋಡ ಅರಣ್ಯ ಪ್ರದೇಶಕ್ಕೆ ಕರೆದುಕೋಂಡು ಹೋಗಿ ಅಲ್ಲಿ ಬಾಲಕಿಯೊಂದಿಗೆ ಲೈಂಗಿಕ ಅತ್ಯಾಚಾರ ಮಾಡಿ ನಂತರ ಮಹಾರಾಷ್ಟ್ರದ ದೇವಗಢಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸುತ್ತಾಡಿಸಿ ವಾಪಾಸು ಕರೆದುಕೊಂಡು ಬಂದು ಬಿಟ್ಟಿರುವ ಅಪರಾಧಕ್ಕೆ ದಾಖಲಾಧಿಕಾರಿ ಎಂ.ಬಿ. ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಎಲ್.ಎಚ್. ಗೌಂಡಿ ತನಿಖೆಯನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರಾದ ಸಿ. ಎಂ.ಪುಷ್ಪಲತಾ ಅವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 11 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 76 ದಾಖಲೆಗಳು, 7 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಕಲ್ಲಪ್ಪಾ ಪರಶುರಾಮ ಸುತ್ತಾರ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ ಪೋಕ್ಸೊ ಕಲಂ 6 ರ ಪ್ರಕಾರ 30 ವರ್ಷಗಳ ಕಾರಾಗೃಹ ಶಿಕ್ಷೆ ದಂಡ ರೂ ಒಂದು ಲಕ್ಷ, ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 2 ವರ್ಷಗಳ ಕಾರಾಗೃಹ, ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ.4 ಲಕ್ಷಗಳ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪರಿಹಾರ ಹಣವನ್ನು ರಾಷ್ಟ್ರಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಮುದ್ದತ್ತ ಠೇವಣಿಯಾಗಿ ಇಡಲು ನ್ಯಾಯಾಲಯವು ಆದೇಶ ಮಾಡಿರುತ್ತಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


Share It

You cannot copy content of this page