ಲವು ದಿನಗಳಿಂದ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಹಲವು ಬೇಡಿಕೆಗಳ ಕುರಿತು ಭಾರೀ ಗೊಂದಲಗಳು ಉಂಟಾಗಿದೆ. ಇದಕ್ಕಾಗಿ ಪ್ರತಿಭಟನೆಗಳನ್ನು ಕೂಡ ನಡೆಸಿದರು. ಆದರೆ ಇದೀಗ ಸಾರಿಗೆ ನೌಕರರಿಗೆ ಬಿಗ್ ಗುಡ್ ನ್ಯೂಸ್ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನ ಹಿಂಬಾಕಿಯನ್ನು (Arrears) ಪಾವತಿಸಲು ಮೊದಲ ಹಂತದಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ಸಂಸ್ಥೆಯ ನೌಕರರಿಗೆ ಕಳೆದ 26 ತಿಂಗಳ ವೇತನ ಹಿಂಬಾಕಿಯಾಗಿ ಒಟ್ಟು 1,271.92 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ, ಪ್ರಸ್ತುತ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಮೊದಲ ಹಂತವಾಗಿ ಸರ್ಕಾರ ₹450 ಕೋಟಿಯನ್ನು ಬಿಡುಗಡೆ ಮಾಡಿದೆ.

