ಅಪರಾಧ ಸುದ್ದಿ

ಬಿಕ್ಷುಕನ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಕ್ರೌರ್ಯ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Share It

ಬೆಂಗಳೂರು: ಬಿಕ್ಷುಕನ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬ ಕ್ರೌರ್ಯ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.

ಈ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ ಎನ್ನಲಾಗಿದ್ದು, ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಡಕ್ಟರ್ ಕ್ರೌರ್ಯದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಬಸ್ ಹತ್ತಲು ಆಗಮಿಸಿದ ಬಿಕ್ಷುಕನ ಮೇಲೆ ಕಾಲಿನಿಂದ ಒದ್ದು, ಕೆಳಗೆ ಬೀಳಿಸಿದ ಕಂಡಕ್ಟರ್ ಅನಂತರ ಆತನನ್ನು ತಿರುಗಿಯೂ ನೋಡದೆ ಮತ್ತೇ ಬಸ್ ಹತ್ತಿಕೊಂಡು ಹೋಗಿದ್ದಾನೆ. ನೆಲಮಂಗಲ ಟೋಲ್ ಗೇಟ್ ಬಳಿ ಘಟನೆ ನಡೆದಿದ್ದು, ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಬಿಎಂಟಿಸಿ ನೌಕರರು ಮನುಷ್ಯತ್ವ ಕಳೆದುಕೊಂಡವರಂತೆ ವರ್ತಿಸುತ್ತಿದ್ದು, ಇದರ ಭಾಗವಾಗಿ ಬಿಕ್ಷುಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸರಕಾರಿ ನೌಕರನೊಬ್ಬ ಇಂತಹ ಅಮಾನವೀಯ ಕ್ರೌರ್ಯ ನಡೆಸಿರುವುದು ಖಂಡನೀಯ, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.


Share It

You cannot copy content of this page